ಮಡಿಕೇರಿ, ಜ. ೧೭: ಯಕ್ಷಗಾನ, ಡೊಳ್ಳುಕುಣಿತ, ಪೂಜಾಕುಣಿತ, ಜಾನಪದ ಗಾಯನ, ಭರತನಾಟ್ಯ, ಸುಗಮ ಸಂಗೀತ ಹೀಗೆ ಹಲವು ಕಲೆಗಳು ನಾಡನ್ನು ಪ್ರತಿಬಿಂಬಿಸುತ್ತಿದ್ದು, ಅವುಗಳನ್ನು ಉಳಿಸಿ ಬೆಳೆಸುವಂತಾಗಬೇಕು; ಜೊತೆಗೆ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು ಎಂದು ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ರಮಾದೇವಿ ಕಳಗಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂಪಾಜೆ ಗ್ರಾಮ ಪಂಚಾಯಿತಿ ಹಾಗೂ ಸಂಪಾಜೆ ಶ್ರೀ ಪಂಚಲಿAಗೇಶ್ವರ ದೇವಸ್ಥಾನ ಸಮಿತಿ ಸಹಯೋಗದೊಂದಿಗೆ ಸಂಪಾಜೆ ಶ್ರೀ ಪಂಚಲಿAಗೇಶ್ವರ ದೇವಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ‘ಸಾಂಸ್ಕೃತಿಕ ಸೌರಭ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾಂಸ್ಕೃತಿಕ ಹಾಗೂ ಜಾನಪದ ಕಲೆಗಳು ನಾಡಿನ ಅಸ್ಮಿತೆಯನ್ನು ಪ್ರತಿಬಿಂಬಿಸುತ್ತಿದ್ದು, ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಲ್ಲಿ ಯುವಜನರು ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು. ಕನ್ನಡ ಜಾಗೃತಿ ಸಮಿತಿ ಸದಸ್ಯ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಕೊಡಗು ಜಿಲ್ಲೆ ಸಾಂಸ್ಕೃತಿಕವಾಗಿ ಶ್ರೀಮಂತಿಕೆಯನ್ನು ಹೊಂದಿದ್ದು, ಹಲವು ಜನಪದ ಹಾಗೂ ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ಕಾಣಬಹುದಾಗಿದೆ ಎಂದು ಹೇಳಿದರು.

ಗಮಕ ಕಲಾವಿದರಾದ ಗಣೇಶ್ ಉಡುಪ ಮಾತನಾಡಿ, ಗಮಕ ಸೇರಿದಂತೆ ಹಲವು ಜನಪದ ಕಲೆಗಳು ಅಪರೂಪದಲ್ಲಿ ಅಪರೂಪವಾಗಿದ್ದು, ಸಂಗೀತ ಮತ್ತು ವ್ಯಾಖ್ಯಾನದ ಮೂಲಕ ಗಮಕವನ್ನು ವಾಚಿಸಲಾಗುತ್ತದೆ. ಇದೊಂದು ಅದ್ಭುತ ಎಂದು ವಿವರಿಸಿದರು. ಸಂಪಾಜೆ ಶ್ರೀ ಪಂಚಲಿAಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಜಯಕುಮಾರ್ ಚಿದ್ಕಾರು ಮಾತನಾಡಿದರು. ಬಿ.ಎಸ್. ಲೋಕೇಶ್ ಸಾಗರ್ ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ಹೆಚ್.ಜಿ. ಕುಮಾರ ನಿರೂಪಿಸಿದರು. ಮಣಜೂರು ಮಂಜುನಾಥ್ ವಂದಿಸಿದರು.

ವೀರಾಜಪೇಟೆಯ ಸ್ವರ್ಣ ಸಂಗೀತ ಶಾಲೆಯ ದಿಲೀಪ್ ಕುಮಾರ್ ತಂಡದವರು ಕರ್ನಾಟಕ ಶಾಸ್ತಿçÃಯ ಸಂಗೀತ ಹಾಡಿದರು. ಕುಶಾಲನಗರದ ಕನ್ನಡ ಸಿರಿ ಕಲಾ ವೃಂದದ ಬಿ.ಎಸ್. ಲೋಕೇಶ್ ಸಾಗರ್ ಸುಗಮ ಸಂಗೀತ ಹಾಡಿದರು. ಸೋಮವಾರಪೇಟೆಯ ಹಿರಿಯ ಆಕಾಶವಾಣಿ ಕಲಾವಿದ ಬಿ.ಎ. ಗಣೇಶ್ ಶಾಂತಳ್ಳಿ ಮತ್ತು ತಂಡದವರು ಜಾನಪದ ಗಾಯನ ಹಾಡಿದರು. ಸುಂಟಿಕೊಪ್ಪದ ವಿದುಷಿ ಸ್ನೇಹಾ ಮತ್ತು ತಂಡದವರು ಭರತನಾಟ್ಯ ನೃತ್ಯ, ಮಂಡ್ಯ ಜಿಲ್ಲೆಯ ವೀರಗಾಸೆ ಕುಣಿತದ ಪ್ರದೀಪ್ ಮತ್ತು ತಂಡದವರು ಡೊಳ್ಳುಕುಣಿತ, ಮಂಡ್ಯ ಜಿಲ್ಲೆಯ ಸಂತೋಷ್ ಕೆ.ಪಿ. ಮತ್ತು ತಂಡದವರು ವೀರಗಾಸೆ ಕುಣಿತ, ಸುಳ್ಯ ತಾಲೂಕಿನ ಯುವಕ ಯಕ್ಷಗಾನ ಕಲಾತಂಡದ ಶೇಖರ್ ಮಣಿಯಾನಿ ಅವರು ಯಕ್ಷಗಾನ ನಾಟ್ಯ ಪ್ರದರ್ಶಿಸಿದರು. ಗಣೇಶ್ ಉಡುಪ ಮತ್ತು ಪ್ರೊ.ಜಿ.ಎನ್.ಅನಸೂಯ ಗಮಕ ಕಾವ್ಯ ಭಾಗ, ಕುಮಾರವ್ಯಾಸ ಭಾರತ ವಾಚಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು