ಕಣಿವೆ, ಜ. ೧೭: ಕುಶಾಲನಗರ ಮಡಿಕೇರಿ ರಾಷ್ಟಿçÃಯ ಹೆದ್ದಾರಿಯ ಆನೆಕಾಡು ಬಳಿ ಹೆದ್ದಾರಿಯ ಉದ್ದಕ್ಕೂ ಪ್ರವಾಸಿ ವಾಹನಗಳಿಂದ ಹೊರ ಹಾಕಲ್ಪಟ್ಟ ನೀರಿನ ಪ್ಲಾಸ್ಟಿಕ್ ಬಾಟಲಿಗಳು, ಊಟ ತಿಂಡಿ ಮಾಡಿ ಬಿಸಾಕಿದ ಪ್ಲಾಸ್ಟಿಕ್ ತಟ್ಟೆ, ಗ್ಲಾಸುಗಳು ಮುಂತಾದ ಪ್ಲಾಸ್ಟಿಕ್ ತ್ಯಾಜ್ಯಗಳು ಸಾಕಷ್ಟು ಪ್ರಮಾಣದಲ್ಲಿ ಬಿದ್ದಿವೆ. ಕೂಡಲೇ ಅರಣ್ಯ ಅಧಿಕಾರಿಗಳು ಈ ಹೆದ್ದಾರಿಯ ಎರಡೂ ಬದಿಗಳಲ್ಲಿ ಸ್ವಚ್ಛತಾ ಕಾರ್ಯ ಮಾಡಿಸುವ ಮೂಲಕ ಸುಂದರವಾದ ಅರಣ್ಯ ಪರಿಸರಕ್ಕೆ ಹಾನಿಯಾಗದಂತೆ ಹಾಗೂ ಅರಣ್ಯದಲ್ಲಿನ ವನ್ಯಪ್ರಾಣಿಗಳ ಆರೋಗ್ಯದ ಮೇಲೆ ಮಾರಕ ದುಷ್ಪರಿಣಾಮವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು.

ಅಲ್ಲದೆ ಈ ಮಾರ್ಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಮುಂದಿನ ದಿನಗಳಲ್ಲಿ ಕಸ ಎಸೆಯುವವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಗುಡ್ಡೆಹೊಸೂರು ಕಾಂಗ್ರೆಸ್ ಮುಖಂಡ ಬಿ.ಎಸ್. ಚಂದ್ರಶೇಖರ್ ಒತ್ತಾಯಿಸಿದ್ದಾರೆ.