ಕುಶಾಲನಗರ, ಜ. ೧೭: ವಾಸವಿ ಕನ್ನಿಕಾಪರಮೇಶ್ವರಿ ದೇವಿಯು ಲೋಕಕಲ್ಯಾಣಾರ್ಥ ಅಗ್ನಿ ಪ್ರವೇಶ ಮಾಡಿದ ಪುಣ್ಯ ದಿನವನ್ನು ಸ್ಥಳೀಯ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ವಾಸವಿ ದೀಕ್ಷಾ ಸಮಿತಿಯ ಅಧ್ಯಕ್ಷ ಕೆ.ಜೆ. ಸತೀಶ್, ಕಾರ್ಯದರ್ಶಿ ಬಿ.ಎಲ್. ಸತೀಶ್ ಮತ್ತಿತರ ಪದಾಧಿಕಾರಿಗಳು ದಿನದ ಮಹತ್ವದ ಬಗ್ಗೆ ಮಾತನಾಡಿದರು. ಬೆಳಿಗ್ಗೆ ೬ ಗಂಟೆಗೆ ಸಂಕಲ್ಪ, ಪಂಚಾಮೃತ ಅಭಿಷೇಕ, ಮಹಾಗಣಪತಿ, ನವಗ್ರಹ, ಮೃತ್ಯುಂಜಯ, ಆಯುಷ್ಯ, ಪರಿವಾರ ದೇವತೆಗಳ ಮತ್ತು ವಾಸವಿ ಮೂಲ ಮಂತ್ರಗಳ ಹೋಮ, ಜನಾಂಗದ ೧೦೨ ಗೋತ್ರದ ಹೋಮ, ತದನಂತರ ಪೂರ್ಣಾಹುತಿ ನಂತರ ದೇವರಿಗೆ ಮಹಾಮಂಗಳಾರತಿ ನಡೆಯಿತು. ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ವಾಸವಿ ದೀಕ್ಷಾ ಸಮಿತಿಯ ಖಜಾಂಚಿ ವಾಣಿಶ್ರೀ, ನಿರ್ದೇಶಕರಾದ ಡಿ.ಎಸ್. ರಮೇಶ್, ಎಸ್.ಎಂ. ಸತೀಶ್, ವಿ.ಆರ್. ಮಂಜುನಾಥ್, ಕೆ.ಎಸ್. ನಾಗೇಶ್, ನಾಗಮಣಿ ಇತರರು ಇದ್ದರು.