ಮಡಿಕೇರಿ, ಜ. ೧೭: ಪೊನ್ನಂಪೇಟೆ ತಾಲೂಕು ಮಾಯಮುಡಿ ಶಾಲೆಯ ಮುಖ್ಯ ಶಿಕ್ಷಕರಾದ ಎಚ್.ಸಿ. ಜಯಮ್ಮ ಅವರು ರೂ.೧೫,೦೦೦ ಮೌಲ್ಯದ ಬ್ಯಾಂಡ್ ಸೆಟ್ ಅನ್ನು ಶಾಲೆಗೆ ಕೊಡುಗೆ ನೀಡಿದರು. ಈ ಸಂದರ್ಭ ಶಿಕ್ಷಕರುಗಳಾದ ಎಂ.ಟಿ. ಸತ್ಯ, ರಾಗಿಣಿ, ಲೀಲಾ, ಸುಮಾ, ಲಾಯ್ಡ್, ಲಾವಣ್ಯ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.