ಮಡಿಕೇರಿ, ಜ. ೧೭: ಪೊನ್ನಂಪೇಟೆ ತಾಲೂಕು ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡಿಕೇರಿ, ತೂಚಮಕೇರಿ, ಬಲ್ಯಮಂಡೂರಿನಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳ ಮಕ್ಕಳ ಗ್ರಾಮಸಭೆ ವಿದ್ಯಾರ್ಥಿನಿ ಜಿ.ಎಸ್. ಸುಪ್ರಿಯಾ ಅಧ್ಯಕ್ಷತೆಯಲ್ಲಿ ನಡೆಯಿತು.
ಬಲ್ಯಮಂಡೂರು ಶಾಲೆಯ ವಿದ್ಯಾರ್ಥಿ ಮಹೇಶ್ ಶಾಲೆಗೆ ತಡೆಗೋಡೆ ಅಗತ್ಯತೆ ಬಗ್ಗೆ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿಯಾಗಿ ಪಾಲ್ಗೊಂಡಿದ್ದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಆಶಾ ಮಕ್ಕಳ ಹಕ್ಕು ಮತ್ತು ರಕ್ಷಣೆಗಳ ಬಗ್ಗೆ ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇಯಂಡ ಜಯಂತಿ, ಮುಖ್ಯ ಶಿಕ್ಷಕರುಗಳಾದ ಕೆ.ಪಿ. ಪವಿತ್ರ, ಸುಬ್ರಮಣಿ, ಎ.ಎನ್. ದಿವ್ಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್, ಕಾರ್ಯದರ್ಶಿ ಸುಶೀಲ, ಶಿಕ್ಷಕರಾದ ತಿರುನೆಲ್ಲಿಮಡ ಜೀವನ್, ಹಸೀನಾ, ಮಂಜುಳ, ಪದ್ಮ, ನಿಶ್ಚಿತ, ನಾಗಿಣಿ, ವಿನುತ, ಸುನೋಜಮ್ಮ ಸೇರಿದಂತೆ ಇನ್ನಿತರರು ಹಾಜರಿದ್ದರು. ವಿದ್ಯಾರ್ಥಿನಿ ಕಾವೇರಿ ಸ್ವಾಗತಿಸಿ, ದೀಪಿಕಾ ವಂದಿಸಿದರು.