ಮಡಿಕೇರಿ, ಜ. ೧೭: ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಸರ್ಕಾರ ಮತ್ತು ರಾಷ್ಟಿçÃಯ ನಾಟಕ ಶಾಲೆ, ದೆಹಲಿ ಇವರುಗಳ ಸಹಯೋಗದೊಂದಿಗೆ “ಭಾರತ ರಂಗ ಮಹೋತ್ಸವ” ಹಾಗೂ “ ರಂಗ ಪರಿಷೆ” ವಿಶೇಷ ರಂಗ ಉತ್ಸವವನ್ನು ಬೆಂಗಳೂರಿನ ಕಲಾಗ್ರಾಮದಲ್ಲಿ ೨೦೨೬ ರ ಫೆಬ್ರವರಿ ೧ ರಿಂದ ೬ ರವರೆಗೆ ಆಯೋಜಿಸುತ್ತಿದೆ.
ಉತ್ಸವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಕಾಡೆಮಿ/ ಪ್ರಾಧಿಕಾರಗಳು ತಮ್ಮ ಅಕಾಡೆಮಿಯ ಕಾರ್ಯಕ್ರಮ, ವಸ್ತು ಹಾಗೂ ಪುಸ್ತಕ ಪ್ರದರ್ಶನ ಮಾರಾಟದ ವ್ಯವಸ್ಥೆಗಳನ್ನು ಮಾಡುತ್ತಿವೆ. ೬ ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಬೆಂಗಳೂರಿನ ೪೫ ಕ್ಕೂ ಹೆಚ್ಚು ರಂಗ ತಂಡಗಳು, ತಮ್ಮ ತಂಡಗಳ ಛಾಯಾಚಿತ್ರ ಪ್ರದರ್ಶನ ಮತ್ತು ರಂಗ ಪರಿಕರಗಳ ಪ್ರದರ್ಶನವನ್ನು ಮಾಡಲಿದ್ದಾರೆ. ಒಟ್ಟು ೫ ವೇದಿಕೆಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕವಿಗೋಷ್ಠಿ, ರಂಗ ಚಿಂತನೆ ಕಲಾಕೃತಿಗಳ ಪ್ರದರ್ಶನ, ಚಿತ್ರ ರಚನೆ, ಬೀದಿನಾಟಕ, ರಂಗಭೂಮಿಗೆ ಸಂಬAಧಿಸಿದ ಕಾರ್ಯಾಗಾರ, ಯಕ್ಷಗಾನ ಬಯಲಾಟ, ನೃತ್ಯ ಪ್ರದರ್ಶನ, ರಂಗಗೀತೆಗಳ ಗಾಯನ, ಸುಗಮ ಸಂಗೀತ- ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ವೈವಿಧ್ಯಮಯ ರಂಗ ಪರಿಷೆಯನ್ನು ಆಯೋಜಿಸಲಾಗುತ್ತಿದೆ. ಈ ಉತ್ಸವದಲ್ಲಿ ಭಾರತದ ಪ್ರಮುಖ ನಾಟಕಗಳಲ್ಲದೆ, ವಿದೇಶದ ನಾಟಕಗಳನ್ನು ಸಹ ಆಹ್ವಾನಿಸಲಾಗಿದೆ. ಇದೊಂದು ಅಭೂತಪೂರ್ವ ಉತ್ಸವವಾಗಿದ್ದು, ಕಳೆದ ಬಾರಿ ನಡೆದ ರಂಗ ಪರಿಷೆಯಲ್ಲಿ ಪ್ರತಿ ದಿನ ೫೦೦೦ಕ್ಕೂ ಹೆಚ್ಚು ಪ್ರೇಕ್ಷಕರು ಭಾಗವಹಿಸಿದ ಐತಿಹಾಸಿಕ ದಾಖಲೆ ಸ್ಮರಣೀಯವಾದದ್ದು. ಇದೇ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿರುವ ೪೦ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿರುವ ಹಾಗೂ ಇಂದಿಗೂ ಸಹ ಕ್ರಿಯಾಶೀಲವಾಗಿರುವ ವರ್ಷಕ್ಕೆ ಕನಿಷ್ಟ ೪ ನಾಟಕ ಪ್ರದರ್ಶನಗಳನ್ನು ಈಗಲೂ ನೀಡುತ್ತಿರುವ ತಂಡಗಳನ್ನು ಗೌರವಿಸುವ ಕೆಲಸವನ್ನು ಅಕಾಡೆಮಿ ಈ ಉತ್ಸವದಲ್ಲಿ ಮಾಡುತ್ತಿದೆ. ೪೦ ವರ್ಷ ಸೇವೆ ಸಲ್ಲಿಸಿರುವ ಬೆಂಗಳೂರೇತರ ರಂಗ ತಂಡಗಳು ದಯಮಾಡಿ ತಮ್ಮ ತಂಡಗಳ ವಿವರಗಳನ್ನು ಶೀಘ್ರವೇ ರಿಜಿಸ್ಟಾçರ್, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು -೫೬೦೦೦೨, ದೂ: ೦೮೦-೨೨೨೩೭೪೮೪/ ೨೨೨೪೪೧೭೬ ವಿಳಾಸಕ್ಕೆ ಕಳುಹಿಸಬೇಕೆಂದು ಹಾಗೂ ಈ ಉತ್ಸವದಲ್ಲಿ ರಂಗ ಗೌರವಕ್ಕೆ ಆಯ್ಕೆ ಮಾಡಿದ ರಂಗ ತಂಡಗಳಿಗೆ ಊಟ ಮತ್ತು ವಸತಿ ನೀಡಿ, ಅವರ ಪ್ರದರ್ಶನಗಳ ಜೊತೆಗೆ ಗೌರವಿಸಲಾಗುವುದು. ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಅವರು ತಿಳಿಸಿದ್ದಾರೆ.