ಕೂಡಿಗೆ, ಜ. ೧೮: ಹೆಬ್ಬಾಲೆ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾವರ್ಧಕ ಸಂಘದ ವತಿಯಿಂದ ಕಾಲೇಜು ಅಭಿವೃದ್ಧಿಗೆ ಪೂರಕವಾಗಿ ಶಾಲೆಯ ತಡೆಗೋಡೆ, ನೂತನ ಕಟ್ಟಡ ಸೇರಿದಂತೆ ಶಾಲೆಯ ದುರಸ್ತಿಗೆ ಸಂಬAಧಿಸಿದAತೆ ಸಂಸದರ ನಿಧಿಯಿಂದ ಅನುದಾನವನ್ನು ನೀಡುವಂತೆ ಹೆಬ್ಬಾಲೆಗೆ ಕಾರ್ಯಕ್ರಮ ನಿಮಿತ್ತ ಅಗಮಿಸಿದ್ದ ಸಂಸದ ಯದುವೀರ್ ಒಡೆಯರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಶ್ರೀ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ವಿ. ಶಿವಪ್ಪ, ನಿರ್ದೇಶಕರಾದ ತನುಕುಮಾರ್, ಹಳೆಕೋಟೆ ಮಂಜುನಾಥ, ರವಿ, ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ್, ಸಹಕಾರ ಸಂಘದ ನಿವೃತ್ತ ಮೇಲ್ವಿಚಾರಕ ಹೆಚ್.ಎಸ್. ರಾಮಶೆಟ್ಟಿ, ಪ್ರಮುಖರಾದ ಹೆಚ್.ಎನ್. ಸುಬ್ರಮಣ್ಯ, ಉಮೇಶ್, ಪುಟ್ಟಪ್ಪ ಸೇರಿದಂತೆ ಹಲವು ಮಂದಿ ಇದ್ದರು.