ಮಡಿಕೇರಿ, ಜ. ೧೯: ಮಡಿಕೇರಿ ಜಾಮಿಯಾ ಮಸೀದಿ ಆಡಳಿತ ಮಂಡಳಿಯ ಪ್ರಮುಖರು ಶಾಸಕ ಡಾ.ಮಂತರ್ ಗೌಡ ಅವರನ್ನು ಭೇಟಿಯಾಗಿ ಮಸೀದಿಗೆ ಸೇರಿದ ಆಸ್ತಿಯ ಕುರಿತು ಚರ್ಚಿಸಿದರು.
ನಗರದ ಸುದರ್ಶನ ಅತಿಥಿ ಗೃಹದಲ್ಲಿ ಭೇಟಿಯಾದ ಮಸೀದಿಯ ಪ್ರಮುಖರಾದ ನಜೀ಼ರ್ ಖುರೇಶಿ, ಭಾಷಾ ಮತ್ತಿತರರು ಜಾಮಿಯಾ ಮಸೀದಿಗೆ ಸೇರಿದ ಆಸ್ತಿ ಒತ್ತುವರಿಯಾಗುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಈ ಸಂದರ್ಭ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಸೋಮಶೇಖರ್ ಎಸ್.ಜೆ ಅವರೊಂದಿಗೂ ಚರ್ಚಿಸಿದರು.
ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷÀ ಹೆಚ್.ಎ.ಹಂಸ, ಪ್ರಧಾನ ಕಾರ್ಯದರ್ಶಿ ರಾವೋಫ್ ಎಂ.ಎನ್, ಪ್ರಚಾರ ಸಮಿತಿಯ ಅಧ್ಯಕ್ಷ ವಿ.ಜಿ.ಮೋಹನ್, ಪ್ರಮುಖರಾದ ಹರಿಪ್ರಸಾದ್ ಕೋಚನ ಹಾಗೂ ಕಾರ್ಯಕರ್ತರು ಹಾಜರಿದ್ದರು.