ನಾಪೋಕ್ಲು, ಜ. ೧೯: ಮೈಸೂರಿನ ಕೊಡಗು ಗೌಡ ಸಮಾಜದ ಅಧ್ಯಕ್ಷರಾಗಿ ಕೊಂಬಾರನ ಬಸಪ್ಪ ಪುನರಾಯ್ಕೆ ಯಾಗಿದ್ದಾರೆ. ಸಮಾಜದಲ್ಲಿ ಜರುಗಿದ ವಾರ್ಷಿಕ ಮಹಾಸಭೆ ಹಾಗೂ ನೂತನ ಆಡಳಿತ ಮಂಡಳಿ ಯ ಚುನಾವಣೆಯಲ್ಲಿ ಕೊಂಬಾರನ ಬಸಪ್ಪ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಯಾದರು. ಉಪಾಧ್ಯಕ್ಷರಾಗಿ ಚಂಡೀರ ಬಸಪ್ಪ, ಕಾರ್ಯದರ್ಶಿ ಯಾಗಿ ಪೊನ್ನೇಟಿ ನಂದ, ಖಜಾಂಚಿಯಾಗಿ ಉಳುವಾರನ ಸುರೇಶ್, ಸಹ ಕಾರ್ಯದರ್ಶಿ ಯಾಗಿ ನಡುಮನೆ ಚಂಗಪ್ಪ ಆಯ್ಕೆಯಾದರು. ನೂತನ ಆಡಳಿತ ಮಂಡಳಿಯ ನಿರ್ದೇಶಕರಾಗಿ ನಡುವಟ್ಟಿರ ಲಕ್ಷö್ಮಣ್, ಪಟ್ಟಡ ಶಿವಕುಮಾರ್, ಹೊಸೂರು ರಾಘವಯ್ಯ, ಕುಂಟುಪುಣಿ ರಮೇಶ್, ಮೊಟ್ಟನ ಕೌಶಿಕ್ ಹಾಗೂ ಮಹಿಳಾ ನಿರ್ದೇಶಕರಾಗಿ ಕುಂಟುಪುಣಿ ಶೀಲ, ಚಪ್ಪೇರ ಯಮುನಾ, ಶಂಕರನ ಶ್ಯಾಮಲ ಅವರುಗಳು ಆಯ್ಕೆಯಾಗಿದ್ದಾರೆ.