ಮಡಿಕೇರಿ, ಜ. ೧೯: ಭಾರತೀಯ ಸೇನಾ ದಿನಾಚರಣೆಯ ಅಂಗವಾಗಿ ಮಡಿಕೇರಿ ಮಾಜಿ ಸೈನಿಕ ಸಂಘ ವತಿಯಿಂದ ನಗರದ ಬಾಲಭವನದ ಮಕ್ಕಳಿಗಾಗಿ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸೇನಾ ಅಧಿಕಾರಿಗಳು ಮಾತನಾಡಿ, ಸೇನಾ ದಿನದ ಮಹತ್ವ, ಭಾರತೀಯ ಸೇನೆಯ ತ್ಯಾಗ ಮತ್ತು ಶೌರ್ಯ, ಹಾಗೂ ದೇಶಭಕ್ತಿಯ ಅಗತ್ಯತೆ ಕುರಿತು ವಿವರಿಸಿದರು. ಮಕ್ಕಳಲ್ಲಿ ರಾಷ್ಟçಪ್ರೇಮ, ಶಿಸ್ತು ಮತ್ತು ಸೇವಾಭಾವನೆ ಬೆಳೆಸುವ ಉದ್ದೇಶದಿಂದ ಪ್ರೇರಣಾದಾಯಕ ಸಂದೇಶಗಳನ್ನು ನೀಡಲಾಯಿತು.
ಈ ಸಂದರ್ಭ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಒಳಗೊಂಡ ಕಿಟ್ಗಳನ್ನು ವಿತರಿಸಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭ ಮಡಿಕೇರಿ ಮಾಜಿ ಸೈನಿಕ ಸಂಘದ ಅಧ್ಯಕ್ಷ ಪಿ.ಕೆ. ಕುಟ್ಟಪ್ಪ, ಪ್ರಮುಖರಾದ ನಿ. ಕರ್ನಲ್ ಚೋಂದಮ್ಮ, ನಿ. ಲೆಫ್ಟಿನೆಂಟ್ ಕರ್ನಲ್ ಕಾವೇರಪ್ಪ, ಕೂಪದಿರ ಪಿ. ಮುತ್ತಣ್ಣ, ಟಿ.ಸಿ. ಗಣಪತಿ, ಎಂ.ಸಿ. ಕಾವೇರಪ್ಪ, ಮಾದಪ್ಪ , ನಾಚಪ್ಪ, ಸೋಮಯ್ಯ, ಮ್ಯಾಥ್ಯೂ, ಸುರೇಶ್, ದೇವಯ್ಯ, ಮಾಚಯ್ಯ, ಬೆಳ್ಳಿಯಪ್ಪ, ಪೂಣಚ್ಚ, ಆನಂದ, ಭೀಮಯ್ಯ, ಕುಟ್ಟಯ್ಯ, ಚಂದನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.