ಸುಂಟಿಕೊಪ್ಪ, ಜ. ೨೦: ಸುಂಟಿಕೊಪ್ಪ ಹೋಬಳಿ ನಾಗರಿಕರ ಹೋರಾಟ ಸಮಿತಿ ಅಧ್ಯಕ್ಷರಾಗಿ ಎಂ.ಎ. ಉಸ್ಮಾನ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಡಿ.ರಾಜು ರೈ ಅವರುಗಳನ್ನು ಆಯ್ಕೆ ಗೊಳಿಸಲಾಯಿತು. ಸುಂಟಿಕೊಪ್ಪ ಪ್ರವಾಸಿ ಮಂದಿರದಲ್ಲಿ ಎಂ.ಎ ಉಸ್ಮಾನ್ ನೇತೃತ್ವದಲ್ಲಿ ನೂತನವಾಗಿ ರಚನೆÀಗೊಂಡ ಸುಂಟಿಕೊಪ್ಪ ಹೋಬಳಿ ನಾಗರಿಕರ ಹೋರಾಟ ಸಮಿತಿಯ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಲಿಂಗ, ಜಾತಿ, ಮತ-ಪಂಗಡ ಅಥವಾ ರಾಜಕೀಯ ಪಕ್ಷಗಳ ತಾರತಮ್ಯ ಮಾಡದೇ ನಾಗರಿಕರನ್ನು ಸಂಘಟನೆ ಯಲ್ಲಿ ಸೇರಿಸಿಕೊಳ್ಳುವ ಮೂಲಕ ಊರಿನ ಬೆಳವಣಿಗೆಗೆ ಪೂರಕವಾದ ಹೋರಾಟವನ್ನು ಮಾಡುವಂತೆ ಅಂಗೀಕರಿಸಲಾಯಿತು. ಸುಂಟಿಕೊಪ್ಪ ಪಟ್ಟಣವು ಹೋಬಳಿ ಕೇಂದ್ರವಾಗಿದ್ದು ಸಾಕಷ್ಟು ಭೌಗೋಳಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಅವುಗಳನ್ನು ಪರಿಹರಿಸುವ ದಿಸೆಯಲ್ಲಿ ಒಗ್ಗಟ್ಟಿನಿಂದ ಹೋರಾಟಗಳನ್ನು ನಡೆಸುವ ಮುಖಾಂತರ ಸುಂಟಿಕೊಪ್ಪ ಹೋಬಳಿ ನಾಗರಿಕರ ಹೋರಾಟ ಸಮಿತಿಯನ್ನು ರಚಿಸಲಾಗುತ್ತಿದೆ ಎಂದು ನೂತನ ಸಮಿತಿಯ ಅಧ್ಯಕ್ಷ ಉಸ್ಮಾನ್ ಹೇಳಿದರು. ಸಮಿತಿಯ ಉಪಾಧ್ಯಕ್ಷರಾಗಿ ನಾಗೇಶ್ ಪೂಜಾರಿ, ಪಟ್ಟೆಮನೆ ಪಿ. ಉದಯಕುಮಾರ್, ಹೆಚ್.ಎಸ್. ಮುತ್ತಪ್ಪ, ಖಜಾಂಚಿಯಾಗಿ ರಮೇಶ್ ಶೇಟ್, ಸಹ ಕಾರ್ಯದರ್ಶಿಗಳಾಗಿ ಆರ್.ರಮೇಶ್ ಪಿಳ್ಳೆ, ಕೆ.ಎಸ್. ಅನಿಲ್ ಕುಮಾರ್, ಎ.ಎಂ. ಶರೀಫ್, ಸಂತೋಷ್ (ದೀನು), ಸಂಘಟನಾ ಕಾರ್ಯದರ್ಶಿಯಾಗಿ ಬಿ.ಎಸ್. ಅಶೋಕ್, ಸಮಿತಿ ಸದಸ್ಯರುಗಳಾಗಿ ಯಂಕನ ಶ್ರೀರಾಮ, ಗೌರವಧ್ಯಕ್ಷರುಗಳಾಗಿ ಎಸ್.ಎ. ವಹೀದ್‌ಜಾನ್, ಜಿನ್ನಪ್ಪ ಪೂಜಾರಿ ಅವರುಗಳನ್ನು ಆಯ್ಕೆಗೊಳಿಸಲಾಯಿತು.