ವೀರಾಜಪೇಟೆ, ಜ. ೨೦ : ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಮಾಕುಟ್ಟ ಭಾಗಕ್ಕೆ ಭೇಟಿ ನೀಡಿದರು.

ಸ್ಥಳೀಯರ ಕೋರಿಕೆ ಮೇರೆಗೆ ಮಾಕುಟ್ಟ ಭಾಗದಲ್ಲಿ ವಾಸಿಸುತ್ತಿರುವ ನಿವಾಸಿಗಳ ಕಾಲೋನಿಗೆ ಶಾಸಕರು ದಿಢೀರ್ ಭೇಟಿ ನೀಡಿ ಅಲ್ಲಿನ ನಿವಾಸಿಗಳೊಡನೆ ಮಾತನಾಡಿ, ಅಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಸ್ವಚ್ಛ ಭಾರತ ಅಭಿಯಾನದಡಿ ಒಂದೇ ಒಂದು ಶೌಚಾಲಯ ಕೂಡ ನಿರ್ಮಿಸದೆ ಇರುವುದನ್ನು ಗಮನಿಸಿ, ಕಡೆಗಣಿಸಲ್ಪಟ್ಟ ಈ ಭಾಗದ ಜನರ ಏಳಿಗೆಗೆ ಮುಂದಿನ ಕ್ರಮ ಕೈಗೊಳ್ಳಲು ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಿಗೆ ಆಧಾರ್ ಕಾರ್ಡ್ ಒದಗಿಸಲು ಈ ಹಿಂದೆ ಶಾಸಕರು ಕ್ರಮ ಕೈಗೊಂಡಿದ್ದರಿAದ, ಈಗ ಇವರಿಗೆ ಆಧಾರ್ ಕಾರ್ಡ್ ದೊರಕಿದ್ದು ಅದನ್ನು ಶಾಸಕರು ವಿತರಿಸಿದರು.

ಅಂಗನವಾಡಿ ಪ್ರಾರಂಭಿಸಲು ಸೂಚನೆ: ಮಾಕುಟ್ಟ ಹಾಡಿಯಲ್ಲಿ ಸುಮಾರು ಹದಿನೈದಕ್ಕೂ ಅಧಿಕ ಮಕ್ಕಳು ಅಂಗನವಾಡಿ ಕೇಂದ್ರಗಳಿಲ್ಲದೆ ವಿದ್ಯಾಭ್ಯಾಸ ಮೊಟಕುಗೊಳಿಸಿರುವುದನ್ನು ಗಮನಿಸಿದ ಶಾಸಕರು, ಅಲ್ಲಿಯೇ ಸ್ಥಳೀಯ ಶಾಲೆಯಲ್ಲಿರುವ ಅಧಿಕ ಕೊಠಡಿಯನ್ನು ಅಂಗನವಾಡಿ ಕೇಂದ್ರವಾಗಿ ಬಳಸುವಂತೆ ಸೂಚಿಸಿದರು. ಅಗತ್ಯ ಬಿದ್ದಲ್ಲಿ ಅದರ ನಿರ್ಮಾಣಕ್ಕೆ ತನ್ನ ಅನುದಾನದಲ್ಲಿ ಹಣ ಒದಗಿಸುವುದಾಗಿ ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ತಿಳಿಸಿದ ಶಾಸಕರು ಕೂಡಲೇ ಈ ಕೇಂದ್ರ ಆರಂಭಿಸಬೇಕೆAದು ಸೂಚನೆ ನೀಡಿದರು. ಈ ಸಂದರ್ಭ ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ವಲಯ ಅಧ್ಯಕ್ಷ ವರ್ಗಿಸ್, ಕೆಡಿಪಿ ಸದಸ್ಯ ರಫೀಕ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹನೀಫ್, ಬಗರ್ ಹುಕುಂನ ಸಲಾಂ, ಜಿಲ್ಲಾ ವÀಕ್ತಾರ ತೆನ್ನಿರ ಮೈನಾ, ಪಕ್ಷದ ಮುಖಂಡ ಜೋಕಿಮ್, ಮಂಜುನಾಥ್, ಬಟ್ಟಕಾಳಂಡ ರಾಜ, ರಜಕ್, ಜಾಫರ್, ಬೋಪಣ್ಣ ಕಟ್ಟಿ, ಸಂತೋಷ್, ಅಯೂಬ್, ಸುನಿಲ್, ವಿಜೇಶ್, ಶಿಬು, ಜಾನು, ವಿಮಲಾ, ಯುವ ಕಾಂಗ್ರೇಸ್ ಘಟಕದ ಅಧ್ಯಕ್ಷ ಪಟ್ಟಡ ರಕ್ಷಿತ್, ಯುವ ಬ್ಲಾಕ್ ಅಧ್ಯಕ್ಷ ಬಶೀರ್, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಮುಖರು ಇದ್ದರು.