ವೀರಾಜಪೇಟೆ, ಜ. ೨೦: ಕೇರಳ-ಕರ್ನಾಟಕ ಅರಣ್ಯ ಗಡಿಯಲ್ಲಿರುವ ಕುನ್ನತೂರ್ಪಾಡಿ ತಿರುವಪ್ಪನ ಮಹೋತ್ಸವವು ಇತ್ತೀಚೆಗೆ ಮುಕ್ತಾಯಗೊಂಡಿತು. ಒಂದು ತಿಂಗಳ ಕಾಲ ಧನುರ್ಮಾಸದಲ್ಲಿ ಕುನ್ನತ್ತೂರು ಪಾಡಿಯ ಮುತ್ತಪ್ಪನ ಆದಿ ಸ್ಥಳದಲ್ಲಿಚಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದು ವಾರ್ಷಿಕ ಉತ್ಸವಕ್ಕೆ ತೆರೆ ಎಳೆಯಲಾಯಿತು.

ಉತ್ಸವದ ಕೊನೆಯ ದಿನ ಸಂಜೆ ಮುತ್ತಪ್ಪ ವೆಳ್ಳಾಟಂ ಮತ್ತು ರಾತ್ರಿ ತಿರುವಪ್ಪ ಕೋಲವನ್ನು ನಡೆಸಲಾಯಿತು. ಮಾರನೆಯ ದಿನ ಬೆಳಿಗ್ಗೆ ತಿರುವಪ್ಪನ ಭಂಡಾರವನ್ನು ಸುತ್ತಿ ಕೀಲಿಕೈಯನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಬಳಿಕ ಶುದ್ಧೀಕರಣ ಸಮಾರಂಭ ನಡೆಯಿತು. ನಂತರ ಮೂಲಂಪೇಟೆ ಭಗವತಿ ದೇವಿಯ ಕೋಲ ಕಟ್ಟಲಾಯಿತು. ಬೆಳಿಗ್ಗೆ ವೆಳ್ಳಾಟ್ಟಂ ನಂತರ, ಭಕ್ತರು ಮತ್ತು ತಿರುವಳಕಾರರು ಪಾಡಿ ಸನ್ನಿಧಿಯಿಂದ ಆಭರಣಗಳು ಮತ್ತು ಇತರ ವಸ್ತುಗಳನ್ನು ಹೊಂದಿರುವ ಪೆಟ್ಟಿಗೆಗಳೊಂದಿಗೆ ಕೆಳಗಿನ ಮುತ್ತಪ್ಪನ ಸನ್ನಿಧಿಗೆ ತೆರಳಿದರು. ಬಳಿಕ ಪಾಡಿಯಲ್ಲಿ ಪ್ರದಕ್ಷಿಣೆ ಮತ್ತು ಪೂಜೆಗಳನ್ನು ನಡೆಸಲಾಯಿತು. ಇದಾದ ನಂತರ, ಮುತ್ತಪ್ಪನ್ ಆರೋಹಣ ಸಮಾರಂಭ ನಡೆಸಿ ತಿರುವಳಕಾರರು, ಭಕ್ತರು ಬೆಟ್ಟದಿಂದ ಇಳಿದು ಕೆಳಗಿನ ಮಡಪುರಕ್ಕೆ ಬಂದರು. ಈ ವರ್ಷದ ತಿರುವಪ್ಪನ ಉತ್ಸವ ಸಮಾರಂಭಗಳು ಮುಗಿದ ಬಳಿಕ ಮೂರನೇ ದಿನ ಶ್ರೀಗಂಧದ ಮರ ನೆಡುವ ಸಮಾರಂಭದೊAದಿಗೆ ಹಬ್ಬಕ್ಕೆ ತೆರೆ ಎಳೆಯಲಾಯಿತು. ಕಾಡಿನಲ್ಲಿರುವ ಮುತ್ತಪ್ಪನ್ ದೇವಸ್ಥಾನಕ್ಕೆ ಹಬ್ಬದ ಸಮಯದಲ್ಲಿ ಒಂದು ತಿಂಗಳು ಮಾತ್ರ ಭೇಟಿ ನೀಡಲು ಅವಕಾಶವಿದೆ. ಎರಡು ದಿನಗಳ ಭಾರೀ ಮಳೆಯ ಹೊರತಾಗಿಯೂ ಪಾಡಿಯಲ್ಲಿರುವ ದೇವಸ್ಥಾನವು ಕಳೆದ ಮೂರು ವಾರಗಳಿಂದ ಭಕ್ತರಿಂದ ತುಂಬಿ ತುಳುಕಿತ್ತು. ಈ ಕುರಿತು ‘ಶಕ್ತಿ’ಯೊಂದಿಗೆ ಮಾತನಾಡಿದ ಕುನ್ನತ್ತೂರು ಪಾಡಿ ದೇವಾಲಯ ಟ್ರಸ್ಟ್ನ ಅಧ್ಯಕ್ಷ ಕುಂಞÂÃರಾಮನ್ ನಾಯನಾರ್ ಅವರು, ಇತರ ರಾಜ್ಯಗಳ ಭಕ್ತರು ಸೇರಿದಂತೆ ಕೊಡಗಿನಿಂದ ಅನೇಕ ಭಕ್ತರು ಬಂದಿದ್ದಾರೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿನಿಂದ ಭಕ್ತರು ಬಂದು ದೇವರ ದರ್ಶನ ಪಡೆದುಕೊಂಡಿದ್ದಾರೆ. ಹೆಚ್ಚಿನ ಜನರಿಗೆ ಮುತ್ತಪ್ಪ ದೇವರ ಆದಿ ಸ್ಥಳದ ಬಗ್ಗೆ ಹಾಗೂ ಕುನ್ನತ್ತೂರು ಪಾಡಿಯಲ್ಲಿ ಒಂದು ತಿಂಗಳು ನಡೆಯುವ ಉತ್ಸವದ ಬಗ್ಗೆ ತಿಳಿದಿರಲಿಲ್ಲ. ಅಲ್ಲದೆ ಕುನ್ನತ್ತೂರು ಪಾಡಿಯ ಹಿನ್ನಲೆ ಸೇರಿದಂತೆ ಅಲ್ಲಿ ಯಾವಾಗ ಹಬ್ಬ ನಡೆಯುತ್ತದೆ ಎಂಬ ಮಾಹಿತಿ ತಿಳಿದಿರಲಿಲ್ಲ. ಈ ಬಾರಿ ಶಕ್ತಿ ಪತ್ರಿಕೆಯಲ್ಲಿ ನಮ್ಮ ದೇವಾಲಯದ ಉತ್ಸವದ ವರದಿ ಬಿತ್ತರವಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಪತ್ರಿಕೆಯಿಂದ ಮಾಹಿತಿ ತಿಳಿದು ಆಗಮಿಸಿರುವುದಾಗಿ ಭಕ್ತರು ನಮಗೆ ತಿಳಿಸಿದರು ಎಂದು ಮಾಹಿತಿಯಿತ್ತರು.