ಮಡಿಕೇರಿ, ಜ. ೨೨: ನಗರದ ಸ್ಟೀವರ್ಟ್ ಹಿಲ್ ಬಳಿ ಇರುವ ಕುಡಿಯುವ ನೀರು ಶುದ್ಧೀಕರಣ ಘಟಕಕ್ಕೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಭೇಟಿ ನೀಡಿ ಪರಿಶೀಲಿಸಿದರು.

ಶುದ್ಧ ಕುಡಿಯುವ ನೀರು ಶುದ್ಧೀಕರಣ ಪ್ರಕ್ರಿಯೆ ಸಂಬAಧಿಸಿದAತೆ ಮಾಹಿತಿ ಪಡೆದರು. ಕುಡಿಯುವ ನೀರಿನ ಗುಣಮಟ್ಟ ಪರಿಶೀಲಿಸಿದರು. ಕುಡಿಯುವ ನೀರು ಸಂಬAಧಿಸಿದAತೆ ಅಮೃತ ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಯನ್ನು ಪರಿಶೀಲಿಸಿದರು.

ಹಾಗೆಯೇ ಸ್ಟೀವರ್ಟ್ ಹಿಲ್ ಬಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಜಾಗ ಸಂಬAಧಿಸಿದAತೆ ಆದಷ್ಟು ಬೇಗ ನಗರಸಭೆ ವ್ಯಾಪ್ತಿಗೆ ಪಡೆಯುವಂತೆ ಸಲಹೆ ಮಾಡಿದರು.

ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಿ. ಬಸಪ್ಪ, ಪೌರಾಯುಕ್ತ ಹೆಚ್.ಆರ್. ರಮೇಶ್, ಇಂಜಿನಿಯರ್‌ಗಳಾದ ಸತೀಶ್, ಪ್ರಸನ್ನ ಇತರರು ಕುಡಿಯುವ ನೀರು ಶುದ್ಧಿಕರಣ ಘಟಕದಲ್ಲಿನ ಕಾರ್ಯಚಟುವಟಿಕೆ ಹಾಗೂ ಕಸ ವಿಲೇವಾರಿ ಬಗ್ಗೆ ಮಾಹಿತಿ ನೀಡಿದರು.