ವೀರಾಜಪೇಟೆ, ಜ. ೨೨: ಕೇರಳದ ಉಳಿಕಲ್ನಲ್ಲಿರುವ ಶ್ರೀ ಆದಿ ಬೈತೂರ್ ಕಾಲಿಯಾರ್ ದೇವಸ್ಥಾನದ ವಾರ್ಷಿಕ ಉತ್ಸವವು ಪ್ರಾರಂಭವಾಗಿದ್ದು ಉತ್ಸವದ ಅಂಗವಾಗಿ ಶ್ರೀ ಭೂತಬಲಿ, ವೃಷಾಬಾಂಜಲಿ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಇನ್ನು ೪ ದಿನಗಳ ಕಾಲ ಕೊಡಗಿನವರ ಉತ್ಸವ ನಡೆಯಲಿದ್ದು ೨೪ ರಂದು ದೊಡ್ಡ ಹಬ್ಬ ನಡೆಯಲಿದೆ. ಬೈತೂರು ದೇವಸ್ಥಾನದ ತಕ್ಕ ಮುಖ್ಯಸ್ಥರಾದ ಪುಗ್ಗೆರ ಪೊನ್ನಪ್ಪ ಹಬ್ಬದ ಬಗ್ಗೆ ಮಾಹಿತಿ ನೀಡಿ, ತಾ. ೨೨ (೮ಊಟ್)ರಂದು ಪುಗ್ಗೆರ ಕುಟುಂಬದ ಎತ್ತು ಪೋರಾಟ, ಅಕ್ಕಿ ಅಳೆಯುವುದು, ೨೩ (೯ಊಟ್) ರಂದು ನಾಡಿನ ಎತ್ತು ಪೋರಾಟ ಅಕ್ಕಿ ಅಳೆಯುವುದು, ರಾತ್ರಿ ೮.೩೦ ಗಂಟೆಗೆ ಪುಗ್ಗೆರ ಕುಟುಂಬದ ವಿಶೇಷ ಪೂಜೆ, ೯ ಗಂಟೆಗೆ ಬೇಟೆ ಕುರುಮಗನ್ ದೇವಸ್ಥಾನದಲ್ಲಿ ಒಂದು ಸಾವಿರ ತೆಂಗನಕಾಯಿ ಹೊಡೆಯುವುದು, ೨೪ (೧೦ಊಟ್) ರಂದು ದೊಡ್ಡ ಹಬ್ಬ, ಅಪರಾಹ್ನ ೨.೩೦ ಗಂಟೆಗೆ ಆನೆ ಅಂಬಾರಿ ಪ್ರದಕ್ಷಿಣೆ, ೨೫ (೧೧ಊಟ್) ರಂದು ಪೂರ್ವಹ್ನ ೯.೩೦ ಗಂಟೆಗೆ ಕೊಡಗಿನ ಎಲ್ಲಾ ತಿರುವಳಕಾರರ ದರ್ಶನ ಹಾಗೂ ಬೈತೂರಪ್ಪ ದೇವರ ಆಶೀರ್ವಾದ ಕಾರ್ಯಕ್ರಮ ನಡೆಯಲಿದೆ ಎಂದರು.