ಬೆಂಗಳೂರು, ಜ. ೨೨: ಇಂದು ವಿಧಾನಸೌಧದಲ್ಲಿ ವಿಧಾನಸಭೆ ಮತ್ತು ಪರಿಷತ್‌ಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಪ್ರಾರಂಭಿಕವಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಮಾಡಿದರು. ಆದರೆ, ಕೆಲವೇ ವಾಕ್ಯಗಳಿಗೆ ತಮ್ಮ ಭಾಷಣವನ್ನು ಅವರು ಮೊಟಕುಗೊಳಿಸಿ ಸದನದಿಂದ ಹೊರ ನಡೆದರು. ಸಾಮಾನ್ಯವಾಗಿ ಆಡಳಿತ ಪಕ್ಷದ ಮಂತ್ರಿ ಮಂಡಲ ಸಿದ್ಧಪಡಿಸಿರುವ ಭಾಷಣವನ್ನು ಪೂರ್ಣವಾಗಿ ರಾಜ್ಯಪಾಲರು ಓದುವ ಪರಿಪಾಠವಿದೆ. ಆದರೆ, ರಾಜ್ಯ ಸರಕಾರ ಸಿದ್ಧಪಡಿಸಿದ ಭಾಷಣದಲ್ಲಿ ಇತ್ತೀಚೆಗೆ ಕೇಂದ್ರ ಸರಕಾರ ಮನರೇಗ ಯೋಜನೆಯನ್ನು ಬದಲಾವಣೆಗೊಳಿಸಿ ಜಿ ರಾಮ್ ಜಿ ಯೋಜನೆಯಾಗಿ ಪರಿವರ್ತಿಸಿದುದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಹಿಂದಿನ ಯೋಜನೆಯನ್ನೇ ಮರು ಜಾರಿಗೊಳಿಸುವಂತೆ ಆಗ್ರಹಿಸಲಾಗಿತ್ತು. ಅಲ್ಲದೆ, ಹಣಕಾಸು ಬಿಡುಗಡೆಯಲ್ಲಿ ಕೇಂದ್ರದ ತಾರತಮ್ಯ ಮತ್ತು ರಾಜ್ಯದ ಕೆಲವು ಯೋಜನೆಗಳಿಗೆ ಹಣ ಬಿಡಗಡೆಗೊಳಿಸದಿರುವ ಬಗ್ಗೆ ಆಕ್ಷೇಪ ವ್ಯಕ್ತಡಿಸಲಾಗಿತ್ತು. ಸರಕಾರ ಸಿದ್ಧಪಡಿಸಿದ ಈ ಭಾಷಣವನ್ನು ಕೇಂದ್ರಾಧೀನದಲ್ಲಿ ಕಾರ್ಯ ನಿರ್ವಹಿಸುವ ರಾಜ್ಯಪಾಲರು ಕೈ ಬಿಟ್ಟು ಒಂದೆರೆಡು ಮಾತುಗಳಿಗೆ ಸೀಮಿತಗೊಳಿಸಿ ಭಾಷಣ ಮುಗಿಸಿ ಹೊರಟಾಗÀ ಕಾಂಗ್ರೆಸ್ ಸದಸ್ಯರು ಅವರ ವಿರುದ್ಧ ಘೋಷಣೆ ಕೂಗಿದರು. ಕಾಂಗ್ರೆಸ್ ಎಂಎಲ್‌ಸಿ ಹರಿಪ್ರಸಾದ್ ಅವರು ರಾಜ್ಯಪಾಲರನ್ನು ಹೋಗದಂತೆ ತಡೆಯಲು ಯತ್ನಿಸಿದಾಗ ಪೊಲೀಸರು ದಾರಿ ಸುಗಮಗೊಳಿಸಿದರು. ಅಲ್ಲದೆ, ಕೆಲವು ಬಿಜೆಪಿ ಶಾಸಕರು ಹಾಗೂ ಹರಿಪ್ರಸಾದ್ ಅವರ ನಡುವೆ ನೂಕಾಟವೂ ಸಂಭವಿಸಿತು. ಬಿಜೆಪಿ ಸದಸ್ಯರು ರಾಜ್ಯಪಾಲರ ಕ್ರಮವನ್ನು ಸಮರ್ಥಿಸಿ ಘೋಷಣೆ ಕೂಗಿದರು. ರಾಜ್ಯಪಾಲರು ರಾಷ್ಟç ಗೀತೆಗೂ ಮುನ್ನ ಸಭೆಯಿಂದ ನಿರ್ಗಮಿಸಿದರು ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದರೆ, ರಾಜ್ಯಪಾಲರ ಸ್ಥಾನÀಕ್ಕೆ ಚ್ಯುತಿ ತರುವಂತೆ ಕಾಂಗ್ರೆÉಸ್ ಸದಸ್ಯರು ಅಸಂವಿಧಾನಾತ್ಮಕವಾಗಿ ವರ್ತಿಸಿದರು ಎಂದು ಬಿಜೆಪಿ ಸದಸ್ಯರು ಆರೋಪಿಸಿದರು. ಅಂತೂ ಕೆಲಕಾಲ ಸದನದಲ್ಲಿ ಗದ್ದಲ ಏರ್ಪಟ್ಟಿತು. ಯಾರು ಏನು ಮಾಡುತ್ತ್ತಿದ್ದಾರೆ ಎಂದು ಗೊತ್ತಾಗದಷ್ಟು ಗದ್ದಲದ ನಡುವೆ ಪೊಲೀಸ್ ಮಧ್ಯಪ್ರವೇಶದಿಂದ ನಿಧಾನವಾಗಿ ಪರಿಸ್ಥಿತಿ ತಿಳಿಗೊಂಡಿತು.

ರಾಜ್ಯಪಾಲರ ಭಾಷಣದ ತುಣುಕು

ಅಧಿವೇಶನಕ್ಕೆ ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮೂರೇ ಸಾಲಿನಲ್ಲಿ ಭಾಷಣ ಮುಗಿಸಿ ಅಧಿವೇಶನದಿಂದ ತೆರಳಿದರು. ರಾಜ್ಯ ಸರ್ಕಾರದ ಭಾಷಣ ಓದಲು ನಿರಾಕರಿಸಿದ ರಾಜ್ಯಪಾಲರು ಕೇವಲ ಮೂರು ಸಾಲುಗಳಲ್ಲಿ ಭಾಷಣ ಮಾಡಿ ನಿರ್ಗಮಿಸಿದರು.

ಅವರ ಭಾಷಣದ ತುಣುಕು ಹೀಗಿದೆ ”ಸಿಎಂ, ಸ್ಪೀಕರ್, ಎಲ್ಲಾ ಸದಸ್ಯರಿಗೆ ಜಂಟಿ ಅಧಿವೇಶನಕ್ಕೆ ಸ್ವಾಗತ, ನನ್ನ ಸರ್ಕಾರ ರಾಜ್ಯದ ಆರ್ಥಿಕ, ಸಾಮಾಜಿಕ, ಬೌದ್ಧಿಕ ಅಭಿವೃದ್ಧಿಗೆ ಬದ್ಧವಾಗಿದೆ. ರಾಜ್ಯದ ಆರ್ಥಿಕ, ಸಾಮಾಜಿಕ, ಬೌದ್ಧಿಕ ವಿಕಾಸವನ್ನು ನನ್ನ ಸರ್ಕಾರ ಎರಡು ಪಟ್ಟು ಹೆಚ್ಚಿಸಲು ಕಟಿಬದ್ಧವಾಗಿದೆ. ಜೈ ಹಿಂದ್, ಜೈ ಕರ್ನಾಟಕ” ಎಂದಷ್ಟೇ ಭಾಷಣ ಮಾಡಿ ರಾಜ್ಯಪಾಲರು ನಿರ್ಗಮಿಸಿದರು. ಸದನದಿಂದ ರಾಜ್ಯಪಾಲರ ನಿರ್ಗಮನದ ಬಳಿಕ ಸದನ ಮತ್ತೆ ಸಮಾವೇಶಗೊಂಡಿತು. ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಬಳಿಕ ಅಗಲಿದ ಗಣ್ಯರಿಗೆ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಸಂತಾಪ ಸೂಚಕ ನಿರ್ಣಯವನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದರು. ಸದನ ಸಂತಾಪ ಸೂಚಿಸಿತು. ಈ ನಡುವೆ ರಾಜ್ಯಪಾಲ ಗೆಹ್ಲೋಟ್ ಅವರ ಇಂದಿನ ವರ್ತನೆ ಕುರಿತು ಪರ ವಿರೋಧ ವಾಗ್ವಾದವು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಅಬ್ಬರಿಸಲ್ಪಟ್ಟಿತು.

ಮುಖ್ಯಮಂತ್ರಿ ಪ್ರತಿಕ್ರಿಯೆ

ರಾಜ್ಯಪಾಲರ ಇಂದಿನ ವರ್ತನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗೆ ಪ್ರತಿಕ್ರಿಯಿಸಿದರು:-“ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯAತೆ ವರ್ತಿಸಿದ್ದಾರೆ, ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆÉ, ಸುಪ್ರೀಂ ಕೋರ್ಟ್ ಮೊರೆ ಹೋಗಲು ಪರಿಶೀಲನೆ ನಡೆಸುತ್ತೇವೆ”

“ಕೇಂದ್ರದಲ್ಲಿ ಮೋದಿ ಸರ್ಕಾರದ ವಿರುದ್ಧ ಟೀಕೆಗಳನ್ನು ಒಳಗೊಂಡಿರುವ ಕಾಂಗ್ರೆಸ್ ಸರ್ಕಾರ ರಚಿಸಿದ ಭಾಷಣದ ಪ್ಯಾರಾಗಳನ್ನು ಕೈಬಿಡದಿದ್ದರೆ, ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವುದಿಲ್ಲ ಎಂದು ರಾಜ್ಯಪಾಲ ಗೆಹ್ಲೋಟ್ ಮಾತನಾಡಲು ನಿರಾಕರಿಸಿದ್ದಾರೆ.

ರಾಜ್ಯಪಾಲರು ಸರ್ಕಾರದ ಭಾಷಣವನ್ನಲ್ಲ, ತಮ್ಮದೇ ಭಾಷಣದ ಒಂದು ವಾಕ್ಯವನ್ನು ಓದಿದರು. ಇದು ಪ್ರತಿನಿಧಿ ಸಭೆಗೆ ಮಾಡಿದ ಅವಮಾನ” ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

“ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಮಾತನಾಡುವ ಬದಲು, ಅವರು ಸ್ವತಃ ಸಿದ್ಧಪಡಿಸಿದ ಭಾಷಣವನ್ನು ಮಾಡಿದ್ದಾರೆ, ಇದು ಭಾರತೀಯ ಸಂವಿಧಾನದ ೧೭೬ ಮತ್ತು ೧೬೩ ನೇ ವಿಧಿಯನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ರಾಜ್ಯಪಾಲರ ವರ್ತನೆಯ ವಿರುದ್ಧ ನಾವು ಪ್ರತಿಭಟಿಸಲಿದ್ದೇವೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವಿಪಕ್ಷ ನಾಯಕರ ಪ್ರತಿಕ್ರಿಯೆ

ಕಾಂಗ್ರೆಸ್ ಕರಾಳ ರೀತಿಯಲ್ಲಿ ಈ ಅಧಿವೇಶನವನ್ನು ನಡೆಸಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ. ರಾಜ್ಯಪಾಲರಿಗೆ ಅಪಮಾನ ಮಾಡಲಾಗಿದೆ ಎಂದಿದ್ದಾರೆ. ಸದನದಲ್ಲಿ ಅಗೌರವ ತೋರಿದ್ದವರ ಮೇಲೆ ಕ್ರಮ ಕೈಗೊಳ್ಳುವಂತೆ ಪತ್ರ ಕೊಟ್ಟಿದ್ದೇವೆ ಎಂದರು.

ಈ ನಡುವೆ ರಾಜ್ಯಪಾಲರು ಪೂರ್ತಿ ಭಾಷಣ ಓದದಿರುವುದು ಕಾಂಗ್ರೆಸ್ ಆಕ್ರೋಶಕ್ಕೆ ಗುರಿಯಾದರೆ, ರಾಜ್ಯಪಾಲರಿಗೆ ಅಗೌರವ ತೋರಿದ್ದಾರೆಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ. ಸಭಾಧ್ಯಕ್ಷರಿಗೂ ದೂರು ನೀಡಿ, ರಾಜ್ಯಪಾಲರಿಗೆ ಅಗೌರವ ತೋರಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.

ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿ ನಿರ್ಗಮಿಸುವ ವೇಳೆ ರಾಜ್ಯಪಾಲರಿಗೆ ಅಪಮಾನ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಬಿಜೆಪಿ ಶಾಸಕರು ಆಗ್ರಹಿಸಿದರೆ, ರಾಷ್ಟ್ರಗೀತೆಗೆ ರಾಜ್ಯಪಾಲರು ಅಗೌರವ ತೋರಿದ್ದಾರೆ ಎಂದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸದಸ್ಯರು ವಿಧಾನಸಭೆಯಲ್ಲಿಂದು ಆರೋಪಿಸಿದರು.

ಮುಖ್ಯ ಹಿನ್ನೆಲೆ

ಈ ಎಲ್ಲ ಬೆಳವಣಿಗೆÀಯ ಮುಖ್ಯ ಹಿನ್ನೆಲೆಯಿಷ್ಟೆ:- ಕಳೆದ ಎರಡು ದಿನಗಳಿಂದ ಹೊಗೆಯಾಡುತ್ತಿದ್ದ ಮನರೇಗಾ ಕಿಚ್ಚು, ಇಂದು ಜಂಟಿ ಅಧಿವೇಶನದಲ್ಲಿ ಸ್ಫೋಟಗೊಂಡಿದೆ. ಬೆಳಿಗ್ಗೆಯಿಂದಲೂ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಜಂಗಿ ಕುಸ್ತಿ ನಡೆಯುತ್ತಲೇ ಇತ್ತು, ವಿಷಯ ಇಷ್ಟೇ. ಮನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಬದಲಾಯಿಸಿ 'ಜಿ ರಾಮ್ ಜಿ' ಯೋಜನೆಯನ್ನಾಗಿ ಮರು ರೂಪಿಸಿದೆ, ಇದು ರಾಜ್ಯ ಸರ್ಕಾರದ ಪಿತ್ಥವನ್ನು ನೆತ್ತಿಗೇರಿಸಿದೆ. ಇದನ್ನು ವಿರೋಧಿಸಲು ರಾಜ್ಯ ಸರ್ಕಾರ ವಿಶೇಷ ಅಧಿವೇಶನವನ್ನು ಕರೆದಿತ್ತು, ಹೀಗಾಗಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಇತ್ತು, ಆದರೆ, ರಾಜ್ಯಪಾಲರು ಭಾಷಣ ಓದದೇ, ರಾಜ್ಯ ಸರ್ಕಾರಕ್ಕೂ “ಡೋಂಟ್ ಕೇರ್” ಅಂದು ಸದನದಿಂದ ಎದ್ದು ಹೊರ ನಡೆದಿದ್ದಾರೆ. ಸದನದಲ್ಲಿ ಸಾಕಷ್ಟು “ಹೈಡ್ರಾಮಾವೇ” ಸೃಷ್ಟಿಯಾಗಿತ್ತು.. ಸರಕಾರ ಸಿದ್ಧಪಡಿಸಿದ ರಾಜ್ಯಪಾಲರ ಭಾಷಣದಲ್ಲಿ ಕೇಂದ್ರ ಸರ್ಕಾರದ ಯೋಜನೆಯ ಹೆಸರನ್ನೇ ರಾಜ್ಯ ಸರ್ಕಾರ ಬದಲಿಸಿದೆ ಎಂಬ ವಿಚಾರವೀಗ ಬಹಿರಂಗಗೊAಡಿದೆ.