ಸುಂಟಿಕೊಪ್ಪ, ಜ. ೨೩ : ಬೋಯಿಕೇರಿಯ ಸಿದ್ಧಿಬುದ್ಧಿ ವಿನಾಯಕ ದೇವಾಲಯದ ೧೦ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ತಾ. ೨೪ ರಂದು (ಇಂದು) ನಡೆಯಲಿದೆ. ಬೆಳಿಗ್ಗೆ ೮.೩೦ ಗಂಟೆಗೆ ಸ್ಥಳ ಶುದ್ಧಿ, ನವಕಳಶ, ೧೦೮ ಕಾಯಿ ಗಣಪತಿಹೋಮ, ಅಪರಾಹ್ನ ೧೨ ರಿಂದ ಮಹಾಪೂಜೆ, ೧.೩೦ರಿಂದ ತೀರ್ಥ ಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ.

ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಚಂಡೆ ಮದ್ದಳೆ ದೀಪದೊಂದಿಗೆ ಊರು ಪ್ರದಕ್ಷಿಣೆ ಶ್ರದ್ಧಾಭಕ್ತಿಯಿಂದ ನೆರವೇರಿತು.