ಶನಿವಾರಸಂತೆ, ಜ. ೨೩ : ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಸೂರು ಗ್ರಾಮದ ಜೈ ಭೀಮ್ ವಿಪ್ಲವ ಯುವ ಬಳಗದ ವತಿಯಿಂದ ತಾ.೨೫ ರಂದು ನ್ಯಾಯದಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭೀಮ್ ಕೊರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಅಂದು ಬೆಳಿಗ್ಗೆ ೧೦ ಗಂಟೆಗೆ ಭೀಮ್ ವಿಪ್ಲವ ಯುವ ಬಳಗದ ಅಧ್ಯಕ್ಷ ಕೆ.ಪಿ. ಗಣೇಶ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸುವರು.

ಮೈಸೂರು ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯ ಭಾಷಣಕಾರರಾಗಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕನಾಥ್, ಚಾಮರಾಜನಗರದ ಅಕ್ಕ ಐಎಎಸ್ ಅಕಾಡೆಮಿ ಸಂಸ್ಥಾಪಕ ಡಾ. ಶಿವಕುಮಾರ್ ಭಾಗವಹಿಸುತ್ತಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ವಿವಿ ಪ್ರೊ. ಡಾ. ಕೆ.ಕೆ. ಧರ್ಮಪ್ಪ, ಶಿಕ್ಷಕರಾದ ಕೆ.ಪಿ.ಜಯಕುಮಾರ್, ಕೆ.ಎನ್.ಕಿರಣ್ ಕುಮಾರ್, ರಾಣಿ ರವೀಂದ್ರ, ಹರೀಶ್ ಮಾಗಲು ಮತ್ತಿತರರು ಪಾಲ್ಗೊಳ್ಳುವರು ಎಂದು ವಿಪ್ಲ ಯುವ ಬಳಗದ ಕಾರ್ಯದರ್ಶಿ ಸಿ.ಜೆ.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.