ಸೋಮವಾರಪೇಟೆ, ಜ. ೨೩: ಕೊಡಗು - ಹಾಸನ ಜಿಲ್ಲೆಗಳ ಗಡಿಯನ್ನು ಹೊಂದಿರುವ ನಿಡ್ತ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರುತ್ತಿದ್ದು, ಜನಸಾಮಾನ್ಯರು ಕಂಗಾಲಾಗಿ ದ್ದಾರೆ. ಮೀಸಲು ಅರಣ್ಯ ಬಿಟ್ಟು ಜನವಸತಿ ಪ್ರದೇಶಕ್ಕೆ ವನ್ಯಪ್ರಾಣಿ ಗಳು ಲಗ್ಗೆಯಿಡುತ್ತಿರುವುದರಿಂದ ಸಾರ್ವಜನಿಕರು ಭಯಾತಂಕದಿAದಲೇ ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೋಮವಾರಪೇಟೆ ತಾಲೂಕು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಭುವಂಗಾಲ, ದೊಡ್ಡಳ್ಳಿ, ಸಂಗಯ್ಯನಪುರ, ಗಣಗೂರು, ಆಲೂರು ಸಿದ್ದಾಪುರ, ಹೊಸಗುತ್ತಿ, ಮಾಲಂಬಿ ಬಾಣಾವರ ಸಂಗಯ್ಯನಪುರ ಹಾಗೂ ಹಾಸನ ಜಿಲ್ಲೆಯ ತರಗಳಲೆ, ಮರಿಯಾನಗರ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದೆ.
ರೈತರು ತಾವು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸಪಡುವಂತಹ ಸನ್ನಿವೇಶ ನಿರ್ಮಾಣವಾಗಿರುವುದು ಒಂದೆಡೆಯಾದರೆ, ಇತ್ತೀಚೆಗೆ ಮಾನವರ ಮೇಲೂ ಕೆಲ ಆನೆಗಳು ಧಾಳಿಗೆ ಮುಂದಾಗುತ್ತಿರುವುದರಿAದ ಜೀವಭಯವೂ ಕಾಡುತ್ತಿದೆ. ಬಾಣಾವರ ಭಾಗದಲ್ಲಿರುವ ನಿಡ್ತ ಮೀಸಲು ಅರಣ್ಯ ವ್ಯಾಪ್ತಿಯ ಭುವಂಗಾಲ, ದೊಡ್ಡಳ್ಳಿ ಸಂಗಯ್ಯನಪುರ, ಗಣಗೂರು, ಆಲೂರು ಸಿದ್ದಾಪುರ, ಹೊಸಗುತ್ತಿ, ಮಾಲಂಬಿ, ಸಿದ್ಧಲಿಂಗಪುರ ಮುಂತಾದ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದೆ. ಈ ಹಿಂದಿನಿAದಲೂ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಇದ್ದರೂ ಸಹ ಮಾನವ ಪ್ರಾಣ ಹಾನಿ ಯಂತಹ ಪ್ರಕರಣ ಕಡಿಮೆಯಿತ್ತು. ಇತ್ತೀಚಿನ ದಿನಗಳಲ್ಲಿ ಕಾಡಾನೆಗಳು ಸ್ಥಳೀಯ ಕೃಷಿಕರ ಮೇಲೆ ಧಾಳಿಗೆ ಮುಂದಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರಸಕ್ತ ವರ್ಷದ ಆರಂಭದ ದಿನದಲ್ಲಿಯೇ ಸಂಗಯ್ಯನಪುರದ ಕೃಷಿಕ ಪೊನ್ನಪ್ಪ ಎಂಬವರ ಮೇಲೆ ಕಾಡಾನೆ ಧಾಳಿ ನಡೆಸಿ ಕೊಂದು ಹಾಕಿದೆ. ಇವರೊಂದಿಗೆ ಸಾಕು ನಾಯಿಯನ್ನೂ ಸಾಯಿಸಿದೆ. ಈ ಘಟನೆಯಿಂದ ಜನರ ಆತಂಕ ಹೆಚ್ಚಾಗಿದೆ. ನಿಡ್ತ ಅರಣ್ಯ ವಲಯದಲ್ಲಿ ಓಡಾಡಿಕೊಂಡಿ ರುವ ಕಾಡಾನೆಗಳು ಅಕ್ಕಪಕ್ಕದ ಗ್ರಾಮಗಳಾದ ಕೂಗೂರು, ಚಿಕ್ಕಾರ, ಮಾಲಂಬಿ, ಹಿತ್ತಲುಗದ್ದೆ, ಹೊಸಗುತ್ತಿ, ಹೊಸಳ್ಳಿ, ದೊಡ್ಡಳ್ಳಿ, ಬಾಣಾವರ, ಭುವಂಗಾಲ, ಸಂಗಯ್ಯನಪುರ, ಗಣಗೂರು, ಸಿದ್ದಲಿಂಗಪುರ, ಆಲೂರು ಸಿದ್ದಾಪುರ ಭಾಗದ ಜನವಸತಿ ಹಾಗೂ ಕೃಷಿ ಪ್ರದೇಶಗಳಿಗೆ ಲಗ್ಗೆಯಿಡುತ್ತಿವೆ. ರಾತ್ರಿ ವೇಳೆಯಲ್ಲಿ ಕಾಡಾನೆಗಳು ಹೊಲ, ತೋಟ-ಗದ್ದೆಗಳಿಗೆ ನುಗ್ಗಿ ಈ ಭಾಗದಲ್ಲಿ ಬೆಳೆಯುವ ಜೋಳ, ಅಡಿಕೆ, ಗೆಣಸು, ತೆಂಗು, ಕೆಸವಿನ ಗೆಡ್ಡೆ, ಬಾಳೆ ಇನ್ನಿತರ ಬೆಳೆ ನಾಶ ಮಾಡುತ್ತಿರುವುದರಿಂದ ಈ ಗ್ರಾಮದ ರೈತರು ಕಂಗಾಲಾಗಿದ್ದಾರೆ. ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಕಂದಕ ಹಾಗೂ ಸೋಲಾರ್ ಫೆನ್ಸಿಂಗ್ ನಿರ್ಮಿಸಿದ್ದರೂ ಸೂಕ್ತ ನಿರ್ವಹಣೆ ಇಲ್ಲದೇ ಸಮಸ್ಯೆ ಜೀವಂತವಿದೆ. ಕೆಲವೆಡೆ ಅರಣ್ಯವನ್ನು ದಾಟಿ ಕೆಲ ಗ್ರಾಮಗಳಿಗೆ ತೆರಳಬೇಕಾಗಿದೆ. ಇಂತಹ ಸ್ಥಳದಲ್ಲಿ ಗೇಟ್ ಅಳವಡಿಕೆ ಮಾಡಿದ್ದರೂ ದಿನದ ೨೪ ಗಂಟೆಯೂ ಗೇಟ್‌ಗಳು ತೆರೆದಿರುವುದರಿಂದ ಕಾಡಾನೆಗಳ ಸರಾಗ ಓಡಾಟ ಸಾಮಾನ್ಯವಾಗಿದೆ. ರೈತರ ಕೃಷಿ ಭೂಮಿಗೆ ಸೋಲಾರ್ ಬೇಲಿ ನಿರ್ಮಿಸಲು ಅರಣ್ಯ ಇಲಾಖೆ ಮುಂದಾಗಬೇಕು. ಹಾಗಾದರೆ ರೈತರೇ ಸೋಲಾರ್ ಬೇಲಿಯ ನಿರ್ವಹಣೆ ಮಾಡಿಕೊಳ್ಳುತ್ತಾರೆ. ಕಾಡಾನೆಗಳನ್ನು ಇಲ್ಲಿಂದ ಹಿಡಿದು ಬೇರೆಡೆಗೆ ಬಿಟ್ಟರೂ ಸಹ ಅದು ಮತ್ತೆ ತನ್ನ ವಾಸಸ್ಥಳಕ್ಕೆ ಬರುತ್ತಿದೆ. ಕಾಡಾನೆಗಳನ್ನು ಸೆರೆ ಹಿಡಿಯುವುದು ತಾತ್ಕಾಲಿಕ ಪರಿಹಾರವಷ್ಟೇ. ಇದರ ಬದಲಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಸ್ಥಳೀಯರಾದ ಹೊನ್ನಪ್ಪ ಅಭಿಪ್ರಾಯಿಸಿದ್ದಾರೆ.