ಕೂಡಿಗೆ, ಜ. ೨೩: ಭೂಮಿಕಾ ಮಹಿಳಾ ಹಿತರಕ್ಷಣಾ ಸಮಿತಿಯಿಂದ ಗಣರಾಜ್ಯೋತ್ಸವ ಆಚರಣೆಯ ಪೂರ್ವಭಾವಿಯಾಗಿ ಕೂಡಿಗೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಪುಟಾಣಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಅನ್ನದಾಸೋಹ ಸಂದರ್ಭ ಸಿಹಿ ವಿತರಿಸಲಾಯಿತು.
ಗಣರಾಜ್ಯೋತ್ಸವ ದಿನದಂದು ಪುಟಾಣಿ ಮಕ್ಕಳು ಶಾಲೆಗೆ ಬಾರದಿರುವುದರಿಂದ ಇಂದೇ ಸಿಹಿ ಹಂಚಲಾಯಿತು ಎಂದು ವೇದಿಕೆ ಅಧ್ಯಕ್ಷೆ ಫಿಲೋಮಿನಾ ತಿಳಿಸಿದರು.
ಈ ಸಂದರ್ಭ ವೇದಿಕೆ ಕಾರ್ಯದರ್ಶಿ ಪದ್ಮಾವತಿ, ಸಹ ಕಾರ್ಯದರ್ಶಿ ಪಾರ್ವತಿ, ಸಂಘಟನಾ ಸಂಚಾಲಕಿ ಜಯ ಪ್ರಕಾಶ್, ಶಾಲಾ ಮುಖ್ಯೋಪಾಧ್ಯಾಯ ಯೋಗೇಶ್, ಸಹ ಶಿಕ್ಷಕ ವೃಂದ, ಸದಸ್ಯರಾದ ಲಲಿತಾ, ಶಾಂತಿ ಉಮೇಶ್, ಜಯಶ್ರೀ, ಧರಣಿ, ಸಾವಿತ್ರಿ, ಉಷಾ, ಜರೀನ, ಸುನಂದ, ಜೂಲಿಮೆರಿ, ಅನವಮಣಿ, ಸಿಂಧೂ, ಶಾಂತಿ, ಗಣೇಶ್, ಗೌರಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.