ವೀರಾಜಪೇಟೆ, ಜ. ೨೩: ನೂತನ ಕಟ್ಟಡಗಳ ನೆಲಮಹಡಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕೆಂದಿರುವ ನಿಯಮವನ್ನು ಪಟ್ಟಣದ ಮುಖ್ಯರಸ್ತೆಯಲ್ಲೆ ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲು ಪುರಸಭೆಯಲ್ಲಿ ಅಧಿಕಾರದಲ್ಲಿದ್ದಾಗ ವಿಫಲರಾಗಿರುವ ಕೆಲವರು ಇದೀಗ ರಸ್ತೆ ವಿಸ್ತರಣೆಗಾಗಿ ಜಾಗ ಬಿಟ್ಟುಕೊಡುವಂತೆ ಮುಖ್ಯರಸ್ತೆಯ ನಿವಾಸಿಗಳನ್ನು ಬೆದರಿಸುತ್ತಿ ದ್ದಾರೆ ಎಂದು ನಾಗರಿಕ ಸಮಿತಿಯ ಸಂಚಾಲಕ ಡಾ. ದುರ್ಗಾ ಪ್ರಸಾದ್ ಆರೋಪಿಸಿದರು. ಈ ಕುರಿತು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪುರಸಭೆಯ ಕೆಲ ಸದಸ್ಯರು ನಿಯಮ ಉಲ್ಲಂಘಿಸಿ ಅಂಗಡಿ ಮಳಿಗೆ ತೆರೆದವರ ವಿರುದ್ಧ ಕ್ರಮಕೈಗೊಳ್ಳದೆ, ಆಗ ಅವರನ್ನು ಬೆಂಬಲಿಸಿ ಭ್ರಷ್ಟಾಚಾರದಲ್ಲಿ ನಿರತರಾಗಿದ್ದರು. ಇದೀಗ ಮುಖ್ಯರಸ್ತೆಯ ಎರಡು ಬದಿಗಳಲ್ಲಿರುವ ಮನೆಗಳಿಗೆ ಕೆಲವರು ಹೋಗಿ ರಸ್ತೆಗೆ ಜಾಗ ಬಿಟ್ಟುಕೊಡುವಂತೆ, ಇಲ್ಲವಾದರೆ ಜೆ.ಸಿ.ಬಿ ಯಂತ್ರ ತಂದು ಒಡೆಯುವುದಾಗಿ ಬೆದರಿಸುತ್ತಿದ್ದಾರೆ ಎಂದರು. ಪುರಸಭೆಗೆ ಸ್ವಚ್ಛ ಭಾರತ್ ಮಿಷನ್-೨.೦ ಯೋಜನೆಯಡಿ ಮಂಜೂರಾದ ೨.೭೬ ಎಂ.ಎಲ್.ಡಿ ಸಾಮರ್ಥ್ಯದ ತ್ಯಾಜ್ಯ ನೀರು ಘಟಕವನ್ನು ಸ್ಥಾಪಿಸಲು ಪ್ರಮುಖರೊಬ್ಬರಿಗೆ ಸೇರಿದ ಕೊಟ್ಟೋಳಿಯಲ್ಲಿನ ಜಾಗಕ್ಕೆ ಎಕರೆಗೆ ೫ ಲಕ್ಷ ರೂ ಸರಕಾರಿ ದರ ನೀಡಬಹುದಾಗಿದೆ. ಆದರೆ ಜಿಲ್ಲಾಧಿಕಾರಿಂiÀiವರ ಅಧ್ಯಕ್ಷತೆಯಲ್ಲಿ ನಡೆದ ದರ ನಿರ್ಧರಣಾ ಸಮಿತಿಯ ಸಭೆಯಲ್ಲಿ ಈ ಜಮೀನಿನ ಒಂದು ಎಕರೆಗೆ ೨೭ ಲಕ್ಷ ರೂ ಯಂತೆ ೩ ಎಕರೆಗೆ ಒಟ್ಟು ೮೬ ಲಕ್ಷ ರೂ ದರ ನಿಗದಿಪಡಿಸಿರುವುದು ಸರಿಯಲ್ಲ. ಈ ಮೂಲಕ ಕೊಟ್ಟೋಳಿಯಲ್ಲಿರುವ ತನ್ನ ಸುಮಾರು ೩ ಎಕರೆ ಜಾಗವನ್ನು ದುಬಾರಿ ಬೆಲೆಗೆ ಪುರಸಭೆ ಕೊಂಡುಕೊಳ್ಳುವAತೆ ಮಾಡುವಲ್ಲಿ ಆ ಪ್ರಭಾವಿ ವ್ಯಕ್ತಿ ಯಶಸ್ವಿಯಾಗಿರು ವುದು ಭ್ರಷ್ಟಾಚಾರವಲ್ಲವೇ..? ಎಂದು ಪ್ರಶ್ನಿಸಿದರು.
ಗ್ರಾಮದಲ್ಲಿ ಈ ಯೋಜನೆ ಕಾರ್ಯಗತ ಗೊಂಡರೆ ಅದರಿಂದ ಗ್ರಾಮದ ಪರಿಸರಕ್ಕೆ ಹಾನಿಯಾಗುವುದು ಮತ್ತು ಅಲ್ಲಿ ಸುತ್ತುಮುತ್ತಲು ವಾಸಿಸುತ್ತಿರುವ ನಿವಾಸಿಗಳ ಆರೋಗ್ಯಕ್ಕೆ, ಕೃಷಿಗೆ ತೊಂದರೆಯಾಗುವುದೆAದು ಗ್ರಾಮಸ್ಥರು ಈಗಾಗಲೇ ಆಕ್ಷೇಪ ಸಲ್ಲಿಸಿದ್ದಾರೆ. ಈ ಮೂಲಕ ಸಾರ್ವಜನಿಕರ ತೆರಿಗೆಯ ಹಣವನ್ನು ಲೂಟಿ ಮಾಡುತ್ತಿರುವುದನ್ನು ಪಟ್ಟಣದ ಜನತೆ ತೀವ್ರವಾಗಿ ಖಂಡಿಸಿ, ಪ್ರತಿಭಟಿಸಬೇಕು ಎಂದು ಅವರು ಕರೆ ನೀಡಿದರು. ಗೋಷ್ಠಿಯಲ್ಲಿ ನೆಲ್ಲಮಕ್ಕಡ ಗಣಪತಿ ಇದ್ದರು.