ಸೋಮವಾರಪೇಟೆ, ಜ. ೨೩: ತಾಲೂಕಿನ ಶಿರಂಗಾಲ ಗ್ರಾಮದ ನಾಮಧಾರಿ ಸಮುದಾಯ ಭವನದ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ. ೨ ಲಕ್ಷ ಅನುದಾನ ಒದಗಿಸಿದ್ದು, ಡಿ.ಡಿ.ಯನ್ನು ಆಡಳಿತ ಮಂಡಳಿ ಅಧ್ಯಕ್ಷ ಎನ್.ಎಸ್. ರಮೇಶ್ ಮತ್ತು ಉಪಾಧ್ಯಕ್ಷ ಎಸ್.ಕೆ. ಪ್ರಸನ್ನ ಅವರಿಗೆ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಹಸ್ತಾಂತರಿಸಿದರು.
ಈ ಸಂದರ್ಭ ತಾಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಸೇವಾ ಪ್ರತಿನಿಧಿಗಳು ಹಾಗೂ ಸಮುದಾಯ ಆಡಳಿತ ಮಂಡಳಿ ಸದಸ್ಯರು ಇದ್ದರು.