ವೀರಾಜಪೇಟೆ, ಜ. ೨೩: ಕೊಡಗಿನ ಶ್ರೀ ಆದಿ ಬೈತೂರಪ್ಪ, ಉಳಿಕ್ಕಲ್‌ನ ವಾಯತ್ತೂರು ಕಾಲಿಯಾರ್ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವದ ಸಲುವಾಗಿ ಕೊಡಗಿನಿಂದ ನಾಡಿನ ಜನರ ಎತ್ತು ಪೋರಾಟ ಹಾಗೂ ಅಕ್ಕಿ ಅಳೆಯುವ ಶಾಸ್ತç ಶುಕ್ರವಾರ ನಡೆಯಿತು.

ಊಟು ಹಬ್ಬದ ಅಕ್ಕಿಯನ್ನು ಕೊಡಗಿನಿಂದ ದೇವಸ್ಥಾನಕ್ಕೆ ತರಲಾಯಿತು. ದೇವಸ್ಥಾನದಲ್ಲಿ ಅಕ್ಕಿ ಹಾಗೂ ಎತ್ತುಗಳೊಂದಿಗೆ ಆಗಮಿಸಿದ ಕೊಡವರನ್ನು ಸಂಪ್ರದಾಯದAತೆ ಬರಮಾಡಿಕೊಂಡರು. ಬಳಿಕ ಕೊಡಗಿನಿಂದ ತಂದ ಅಕ್ಕಿಯನ್ನು ಅಳೆಯಲಾಯಿತು. ಈ ಬಾರಿ ಹೆಚ್ಚು ಅಕ್ಕಿ ದೇವಸ್ಥಾನಕ್ಕೆ ಎತ್ತು ಪೋರಾಟ್ ಮೂಲಕ ತಲುಪಿತು.

ಎಂದಿನAತೆ ಹಬ್ಬದ ಪ್ರಯುಕ್ತ ಶ್ರೀ ಭೂತಬಲಿ, ವಿಶೇಷ ಪೂಜೆ, ನೈವೇದ್ಯ, ಪುಗ್ಗೇರ ಮನೆಯವರ ಪೂಜಾ ಕೈಂಕರ್ಯಗಳು, ನಾಡಿನವರ ಪೂಜಾ ಕೈಂಕರ್ಯಗಳು, ಕೊಡವರ ಸಾಂಪ್ರಾದಾಯಿಕ ದುಡಿಕೊಟ್ಟ್ ಪಾಟ್, ಸಂಜೆ ದೀಪಾಂಜಲಿ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ದೇವಾಲಯದ ತಕ್ಕರಾದ ಪುಗ್ಗೇರ ಪೊನ್ನಪ್ಪ, ಭಕ್ತಜನ ಸಂಘದ ಪದಾಧಿಕಾರಿಗಳು, ತಕ್ಕಮುಖ್ಯಸ್ಥರು, ಟ್ರಸ್ಟಿಗಳು, ಪುಗ್ಗೇರ ರಂಜಿ, ಪುಗ್ಗೇರ ನಂದ, ಶಿವಕುಮಾರ್, ಸ್ಥಳೀಯ ಹಾಗೂ ಕೊಡಗಿನ ಭಕ್ತಾದಿಗಳು, ದೇವಾಲಯದ ಪ್ರಧಾನ ಅರ್ಚಕರು, ಕೋಮರತಚ್ಚನ್ ಸೇರಿದಂತೆ ಇತರರು ಹಾಜರಿದ್ದರು.