ಐಗೂರು, ಜ. ೨೩: ಗರಗಂದೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ ಆಧಾರಿತ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮ ನಡೆಯಿತು.

ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭೋಜಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಿಕ್ಷಕಿ ಶಶಿರೇಖಾ ಕಾರ್ಯಕ್ರಮ ನಿರೂಪಿಸಿದರು. ಸಿಆರ್‌ಪಿ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿರುವ ಕೌಶಲ್ಯವನ್ನು ಹೊರ ತರುವ ಉದ್ದೇಶದಿಂದ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು ತಾವು ಅಭ್ಯಾಸ ಮಾಡಿದ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶವಿದೆ ಎಂದರು.

ಮಕ್ಕಳ ಕೌಶಲ್ಯವನ್ನು ಹೊರ ತರಲು ಕಥೆ ಕಟ್ಟುವುದು, ಮೋಜಿನ ಗಣಿತ, ಪೋಷಕ ವಿದ್ಯಾರ್ಥಿಗಳ ಸಹ ಸಂಬAಧದ ಆಟ, ಪೌಷ್ಟಿಕ ಆಹಾರ ಬಳಸಿ ರಂಗವಲ್ಲಿ ಹಾಕುವುದು, ನೆನಪಿನ ಶಕ್ತಿಯ ಪರೀಕ್ಷೆ, ಗಟ್ಟಿ ಓದು, ಕಾರ್ಯಕ್ರಮಗಳು ನಡೆಯಿತು.

ಮಾದಾಪುರ, ಹೊಸತೋಟ, ಗರಗಂದೂರು, ಗುಂಡುಕುಟ್ಟಿ, ಅಂಜನಗೇರಿ, ಬೆಟಗೇರಿ, ಹಟ್ಟಿಹೊಳೆ, ಮೂವತ್ತೊಕ್ಲು ಮತ್ತು ಸೂರ್ಲಬ್ಬಿ ಶಾಲೆಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಭಾಗವಹಿಸಿದ್ದರು. ಪ್ರಾರಂಭದಲ್ಲಿ ಮುಖ್ಯ ಶಿಕ್ಷಕಿ ಪಾರ್ವತಿ ಸ್ವಾಗತಿಸಿ, ಶಿಕ್ಷಕಿ ಉಮಾದೇವಿ ವಂದಿಸಿದರು.