ವೀರಾಜಪೇಟೆ, ಜ. ೨೪: ಎನ್.ಎಸ್.ಡಿ.ಸಿ ಸ್ಕಿಲ್ ಇಂಡಿಯಾದ ಅನುಮೋದಿತ ತರಬೇತಿ ಪಾಲುದಾರ ಆವಾಸ್(ಎವಿಎಎಸ್)ನಿಂದ ಆಯೋಜಿಸಲ್ಪಟ್ಟ ೧೪ನೇ ರಾಷ್ಟಿçÃಯ ಮಟ್ಟದ ಚಾಂಪಿಯನ್‌ಶಿಪ್ ೨೦೨೫ ರಲ್ಲಿ, ರಾಷ್ಟಿçÃಯ ಮಟ್ಟದ ಅಬಾಕಸ್ ಮತ್ತು ವೇದ ಗಣಿತ ಚಾಂಪಿಯನ್‌ಶಿಪ್‌ನಲ್ಲಿ ರಾಷ್ಟಿçÃಯ ಚಾಂಪಿಯನ್ ಆಗಿ ವೀರಾಜಪೇಟೆಯ ಸ್ರಿಹ ಸುರೇಶ್ ಹೊರಹೊಮ್ಮಿದ್ದಾರೆ. ಬೀಡ್ಸ್ ಅಂಡ್ ಬ್ರೆöÊನ್ ವಿಭಾಗದಲ್ಲಿ ಅಭ್ಯಾಸಿಸಿದ ಸ್ರಿಹ ಸುರೇಶ್ ೧೦೦ ಪ್ರಶ್ನೆಗಳನ್ನು ೫ ನಿಮಿಷ ೧೪ ಸೆಕೆಂಡ್‌ನಲ್ಲಿ ಉತ್ತರಿಸಿ ರಾಷ್ಟç ಮಟ್ಟದಲ್ಲಿ ಚಾಂಪಿಯನ್ ಆಗಿದ್ದಾರೆ. ಇವರಿಗೆ ಶಿಕ್ಷಕರಾದ ದೇಚಮ್ಮ ಅವರು ತರಬೇತಿ ನೀಡಿದ್ದಾರೆ. ಐದೂವರೆ ವರ್ಷದ ಈ ಬಾಲಕಿ ವೀರಾಜಪೇಟೆಯ ಸ್ಯಾಪಲಿಂಗ್ ಮಾಂಟೆಸ್ಸರಿಯಲ್ಲಿ ಯುಕೆಜಿಯಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ. ಸ್ರಿಹ ಸುರೇಶ್ ವೀರಾಜಪೇಟೆಯ ಸುರೇಶ್ ಹಾಗೂ ಸೌಮ್ಯ ಅವರ ಪುತ್ರಿ.