ಚೆಯ್ಯಂಡಾಣೆ, ಜ. ೨೪: ವೀರಾಜಪೇಟೆ ನಾಪೋಕ್ಲು ಮುಖ್ಯ ರಸ್ತೆಯ ಹುಣಸೂರು ಭಾಗಮಂಡಲ ರಾಷ್ಟಿçÃಯ ಹೆದ್ದಾರಿಯ ೯೦ರ ಕಡಂಗ - ಚೆಯ್ಯಂಡಾಣೆ ರಸ್ತೆಯ ಕಾಮಗಾರಿ ಆರಂಭಗೊAಡಿದ್ದು ಇದು ಕಳಪೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಾಮಗಾರಿ ನಡೆಯುತಿದ್ದ ಸ್ಥಳಕ್ಕೆ ಸಹಾಯಕ ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್ ಗಿರೀಶ್ ಭೇಟಿ ನೀಡಿದ ಸಂದರ್ಭ ಗಿರೀಶ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು ಕೂಡಲೇ ಮೋರಿ ನಿರ್ಮಿಸುವ ಸ್ಥಳದಲ್ಲಿ ಸೇತುವೆ ನಿರ್ಮಿಸಬೇಕು, ರಸ್ತೆ ಕಾಮಗಾರಿ ಕಳಪೆಯಾಗಬಾರದು ಕಳಪೆಯಾದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ಪೋಕ್ಕುಳಂಡ್ರ ದನೋಜ್ ಕುಮಾರ್ (ದಿವ್ಯ)ಮಾತನಾಡಿ ಕಡಂಗದಿAದ ಚೆಯ್ಯಂಡಾಣೆ ಮಾರ್ಗವಾಗಿ ತೆರಳುವ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದು ಇದು ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ತಿಳಿದು ಇಲ್ಲಿನ ಗ್ರಾಮಸ್ಥರು ಎಲ್ಲರೂ ಸೇರಿದ್ದೇವೆ. ರಾಜ್ಯ ಹೆದ್ದಾರಿಗೆ ಸೇರುವ ಈ ರಸ್ತೆಯಲ್ಲಿ ಮೋರಿಗಳನ್ನು ಅಳವಡಿಸಿ ಅವೈಜ್ಞಾನಿಕವಾಗಿ ಕಾಮಗಾರಿಯನ್ನು ಪ್ರಾರಂಭಿಸುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ. ರಾಜ್ಯ ಹೆದ್ದಾರಿಗೆ ಸೇರಿದ ರಸ್ತೆಯ ತಗ್ಗು ಪ್ರದೇಶವನ್ನು ಎತ್ತರಪಡಿಸಬೇಕೆ ಹೊರತು ಮೋರಿ ಅಳವಡಿಸುವುದು ಸರಿಯಲ್ಲ. ಅದರಂತೆ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಮಾಡದೇ ಹದಗೆಟ್ಟ ರಸ್ತೆಯನ್ನು ಸಂಪೂರ್ಣವಾಗಿ ಅಗೆದು ಉತ್ತಮ ಗುಣಮಟ್ಟದ ರಸ್ತೆಯನ್ನು ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.
ನರಿಯಂದಡ ಗ್ರಾ.ಪಂ. ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಮಾತನಾಡಿ ಕಡಂಗ ಚೆಯ್ಯಂಡಾಣೆ ೪.೭ ಕಿಲೋಮೀಟರ್ ರಸ್ತೆಯನ್ನು ಶಾಸಕ ಪೊನ್ನಣ್ಣ ಅವರು ಮುತುವರ್ಜಿ ವಹಿಸಿ ಕಳೆದ ಅವಧಿಯಲ್ಲಿ ಟೆಂಡರನ್ನು ಕರೆದು ಕಾಮಗಾರಿ ಪ್ರಾರಂಭಕ್ಕೂ ಮೊದಲು ಚರಂಡಿ ಅಗಲೀಕರಣ ಹಾಗೂ ದೊಡ್ಡ ಗುಂಡಿಗಳನ್ನು ಮುಚ್ಚುವ ಕಾಮಗಾರಿಗೆ ಚಾಲನೆ ನೀಡಲಾಗಿದೆ ಈ ರಸ್ತೆಯ,ಮಧ್ಯದಲ್ಲಿ ಸೇತುವೆ ನಿರ್ಮಾಣ ಮಾಡಬೇಕೆಂಬ ನಮ್ಮ ಒತ್ತಾಯದ ಮೇರೆಗೆ ಪರಿಶೀಲನೆ ನಡೆಸಿದಾಗ ಪೈಪ್ ಅಳವಡಿಸಿ ಮೋರಿ ನಿರ್ಮಾಣಕ್ಕೆ ಅಡ್ಡಿ ಉಂಟಾಗಿತ್ತು. ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದ್ದು ಟೆಂಡರ್ ಪಕ್ರಿಯಲ್ಲಿ ಸೇತುವೆ ಇಲ್ಲದ ಕಾರಣ ತೊಂದರೆಯಾಗಿದ್ದು ಮುಂದಿನ ದಿನಗಳಲ್ಲಿ ಸೇತುವೆಯನ್ನು ನಿರ್ಮಿಸಿ ಕೊಡುವ ಭರವಸೆಯನ್ನು ಅಭಿಯಂತರರು ನೀಡಿದ್ದಾರೆ ಎಂದರು.
ಗ್ರಾಮಸ್ಥ ಕೋಡಿರ ತಮ್ಮಯ್ಯ ಮಾತನಾಡಿ ಈ ರಸ್ತೆ ಇಡೀ ಕೊಡಗಿನ ಜನರಿಗೆ ಪ್ರಮುಖವಾದ ರಸ್ತೆ, ಇದು ರಾಜ್ಯ ಹೆದ್ದಾರಿ ಹುಣಸೂರು ತಲಕಾವೇರಿ ರಸ್ತೆಯಾಗಿದ್ದು ಹಲವಾರು ವರ್ಷಗಳಿಂದ ಲೋಕೋಪಯೋಗಿ ಇಲಾಖೆಗೆ ಸರಿಪಡಿಸಲು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಇದೀಗ ತಾನೇ ನೂತನ ರಸ್ತೆ ಕಾಮಗಾರಿ ಆರಂಭವಾಗಿದೆ ಈ ಕಾಮಗಾರಿ ಕಳಪೆಯಿಂದ ಕೂಡಿದೆ. ರಸ್ತೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಗ್ರಾಮಸ್ಥರು ಕಳಪೆ ಕಾಮಗಾರಿ ನಡೆಯದ ರೀತಿಯನ್ನು ಮುತುವರ್ಜಿ ವಹಿಸಬೇಕೆಂದರು.
ಸಾಮಾಜಿಕ ಹೋರಾಟಗಾರ ಪ್ರತೀಕ್ ಪೊನ್ನಣ್ಣ ಮಾತನಾಡಿ, ಶಾಸಕರಾದ ಎ.ಎಸ್. ಪೊನ್ನಣ್ಣ ಅವರ ಅನುದಾನದಿಂದ ಇಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷದಿಂದ ಈ ಕಾಮಗಾರಿ ಕಳಪೆ ಆಗಬಾರದು ಎನ್ನುವ ಉದ್ದೇಶದಿಂದ ಅಧಿಕಾರಿಗಳಿಗೆ ಉತ್ತಮ ರಸ್ತೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದೇವೆ. ಈ ಭಾಗದ ಕಾಮಗಾರಿಗೆ ಶಾಸಕರು ಕೂಡಲೇ ಸ್ಪಂದಿಸಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲು ಸಂಬAಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿ ಮಾಡಿದರು.
ಗ್ರಾ.ಪಂ. ಸದಸ್ಯ ಸುಬೈರ್ ಮಾತನಾಡಿ ಕಡಂಗದಿAದ ಚೆಯ್ಯಂಡಾಣೆವರೆಗಿನ ರಸ್ತೆ ಕಾಮಗಾರಿ ಉತ್ತಮ ರೀತಿಯಲ್ಲಿ ನಡೆಯಲಿ ಕಳಪೆ ಕಾಮಗಾರಿ ನಡೆಯದಂತೆ ಅಧಿಕಾರಿಗಳು ಎಚ್ಚೆತ್ತು ಕೊಳ್ಳಬೇಕೆಂದರು. ಕೋಡಿರ ಪ್ರಕಾಶ್ ಈರಪ್ಪ ಮಾತನಾಡಿ ರಸ್ತೆ ಕಾಮಗಾರಿ ಉತ್ತಮವಾಗಿ ನಡೆಯಲಿ ಗ್ರಾಮಸ್ಥರು ಕಳಪೆ ಕಾಮಗಾರಿಗೆ ನಡೆಯದಂತೆ ನಿಗಾವಹಿಸಬೇಕು ಎಂದರು.
ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಿರೀಶ್ “ಶಕ್ತಿ''ಯೊಂದಿಗೆ ಪ್ರತಿಕ್ರಿಯಿಸಿ ಹುಣಸೂರು ತಲಕಾವೇರಿ ರಾಜ್ಯ ಹೆದ್ದಾರಿಯ ಕಡಂಗದಿAದ ಚೆಯ್ಯಂಡಾಣೆ ಮಾರ್ಗದ ೪.೭ ಕಿಲೋಮಿಟರ್ ರಸ್ತೆಯನ್ನು ಮರುಡಾಂಬರಿಕರಣ ಮಾಡುತ್ತಿದ್ದೇವೆ. ರಸ್ತೆಯ ಮಧ್ಯದಲ್ಲಿ ಮಳೆ ನೀರು ನಿಲ್ಲದೆ ಸರಾಗವಾಗಿ ಹರಿಯುವಂತೆ ಮೋರಿಯನ್ನು ಅಳವಡಿಸಲಾಗುತ್ತಿದೆ. ಗುತ್ತಿಗೆದಾರರಿಗೆ ಮೊದಲು ಗುಂಡಿ ಮುಚ್ಚಿ ನಂತರ ಮರುಡಾಂಬರೀಕರಣ ಮಾಡಲು ಸೂಚಿಸಲಾಗಿದೆ ಯಾವುದೇ ಕಳಪೆ ಕಾಮಗಾರಿ ನಡೆಯುವುದಿಲ್ಲ ರಸ್ತೆಯ ಕಾಮಗಾರಿ ಎಲ್ಲವು ಉತ್ತಮವಾಗಿ ನಡೆಯಲಿದೆ ಸಾರ್ವಜನಿಕರು ಸಹಕರಿಸಬೇಕೆಂದರು. ಈ ಸಂದರ್ಭ ಗ್ರಾಮಸ್ಥರಾದ ಐತಿಚಂಡ ಭೀಮಯ್ಯ, ಬಿದ್ದೇರಿಯಂಡ ದೇವಯ್ಯ, ಮಧು, ಝಕರಿಯ, ರಾಜ ಉತ್ತಪ್ಪ, ಮೋಹನ್ ಕುಮಾರ್, ಗ್ರಾಮಸ್ಥರು ಇದ್ದರು.
- ಅಶ್ರಫ್