ಮಡಿಕೇರಿ, ಜ. ೨೫: ರಥಸಪ್ತಮಿ ಅಂಗವಾಗಿ ಇಲ್ಲಿನ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ದೇವಿಗೆ ವಿಶೇಷ ಅಲಂಕಾರದೊAದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಸತ್ಯೇಶ್ ಭಟ್ ನೇತೃತ್ವದ ಅರ್ಚಕರ ತಂಡ ಪೂಜಾ ಕಾರ್ಯಗಳನ್ನು ನೆರವೇರಿಸಿದರು.

ಮಹಿಳೆಯರು ಭಜನೆ ಹಾಡಿದರೆ, ಪುರುಷರಾದಿಯರಾಗಿ ಎಲ್ಲರೂ ದೇವಿಗೆ ಸಂಪ್ರದಾಯದAತೆ ಬಹುಪರಾಕ್ ಹಾಕಿದರು. ಮಹಾ ಮಂಗಳಾರತಿ ಬಳಿಕ ತೀರ್ಥ ಪ್ರಸಾದ ಹಾಗೂ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.