ಮಡಿಕೇರಿ, ಜ. ೨೫: ತುಮಕೂರಿನಲ್ಲಿ ನಡೆದ ಕರ್ನಾಟಕ ಕ್ರೀಡಾಕೂಟದಲ್ಲಿ ಟೆಕ್ವಾಂಡೋ ವಿಭಾಗದಲ್ಲಿ ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್‌ನ ವಿದ್ಯಾರ್ಥಿ ಎನ್.ಕೆ. ಪ್ರಜ್ಞಾ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾಳೆ.

ಕರ್ನಾಟಕ ಸರಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಂಪಿಕ್ ಸಂಸ್ಥೆಯ ಸಹಯೋಗದಲ್ಲಿ ಆರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಅಂಡರ್ ೭೩ ಕೆ.ಜಿ ವಿಭಾಗದಲ್ಲಿ ಎನ್.ಕೆ.ಪ್ರಜ್ಞಾ ಕೊಡಗನ್ನು ಪ್ರತಿನಿಧಿಸಿದ್ದರು.

ಮಂಗಳೂರಿನ ಶ್ರೀಚೈತ್ಯನ್ಯ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಪ್ರಜ್ಞಾ, ಮಡಿಕೇರಿ ನಗರದ ದೇಚೂರು ನಿವಾಸಿ ಎನ್.ಎನ್. ಕುಶಾಲ್ ಕುಮಾರ್ ಹಾಗೂ ಸಿ. ಪುಷ್ಪಲತ ದಂಪತಿಯ ಪುತ್ರಿ. ಇವರು ಟೆಕ್ವಾಂಡೋ ಕ್ಲಬ್‌ನ ಮಾಸ್ಟರ್ ಕುಶಾಲ್ ಕುಮಾರ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.