ವೀರಾಜಪೇಟೆ, ಜ. ೨೫: ಸಮೀಪದ ಹೆಗ್ಗಳ ಗ್ರಾಮದ ಎಡಮಕ್ಕಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬ್ರಹ್ಮ ಕಲಶಾಭಿಷೇಕ ಹಾಗೂ ವಾರ್ಷಿಕ ಮಹೋತ್ಸವವು ತಾ. ೨೭, ೨೮ ಹಾಗೂ ೨೯ ರಂದು ಜರುಗಲಿದೆ. ತಾ. ೨೭ ರಂದು ಮಹಾಪೂಜೆ, ಪ್ರಸಾದ ಶುದ್ಧಿ ಕ್ರಿಯೆಗಳು ಹಾಗೂ ಅನ್ನ ಸಂತರ್ಪಣಾ ಸೇವೆ ನಡೆಯಲಿದೆ.

ತಾ. ೨೮ ರಂದು ಮಹಾ ಗಣಪತಿ ಹೋಮ, ಉಷಾ ಪೂಜೆ, ಕಲಶ ಪೂಜೆ, ಕಲಶಾಭಿಷೇಕ, ಧ್ವಜಾರೋಹಣ, ಮಹಾಪೂಜೆ, ಆದಿವಾಸ ಹೋಮ, ದೀಪಾರಾಧನೆ, ತಾಲಪೊಲಿ ಮೆರವಣಿಗೆ, ತಾಯಂಭಗA ಹಾಗೂ ಅನ್ನ ಸಂತರ್ಪಣಾ ಸೇವೆ ಜರುಗಲಿದೆ. ಅಂದು ರಾತ್ರಿ ೯ ಗಂಟೆಗೆ ಸಭಾ ಕಾರ್ಯಕ್ರಮ, ನಂತರ ಸ್ಥಳೀಯ ಮಕ್ಕಳಿಂದ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆಯಲಿವೆ. ತಾ.೨೯ ರಂದು ಮಹಾ ಗಣಪತಿ ಹೋಮ, ಬೆಳಿಗ್ಗೆ ೭:೩೦ ಕ್ಕೆ ಬ್ರಹ್ಮ ಕಲಶಾಭಿಷೇಕ, ಉಷಾ ಪೂಜೆ, ದೀಪಾರಾಧನೆ, ಮಹಾಪೂಜೆ, ಅನ್ನ ಸಂತರ್ಪಣಾ ಸೇವೆ ಜರುಗಲಿದೆ. ನಂತರ ಮನರಂಜನಾ ಹಾಗೂ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆಯಲಿದೆ.