ವೀರಾಜಪೇಟೆ, ಜ. ೨೫: ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ವೀರಾಜಪೇಟೆ ಉಪ ಖಜಾನೆಯ ನೂತನ ಕಚೇರಿಗೆ ಭೇಟಿ ನೀಡಿದರು.
ಈ ಸಂದರ್ಭ ಉಪ ಖಜಾನೆ ಸಿಬ್ಬಂದಿಗಳು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಪ್ರಬಾರ ಪತ್ರಾಂಕಿತ ಉಪ ಖಜಾನಾಧಿಕಾರಿ ಗಣೇಶ್ ಎನ್.ಕೆ, ಸಿಬ್ಬಂದಿಗಳಾದ ಪೂಜಾ ಶೆಟ್ಟಿ, ಎನ್.ಎಸ್. ಮಹೇಶ್ ಹಾಗೂ ಇತರರು ಉಪಸ್ಥಿತರಿದ್ದರು.