ಮಡಿಕೇರಿ, ಜ. ೨೬: ಕೊಡವರನ್ನು ಒಳಗೊಂಡ ಅಂತರ್ಗತ ಗಣರಾಜ್ಯಕ್ಕಾಗಿ ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ನೆರವೇರಿತು.
ಸಿ.ಎನ್.ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ಮುಂದಾಳತ್ವದಲ್ಲಿ ನಡೆದ ಸತ್ಯಾಗ್ರಹದಲ್ಲಿ ಕೊಡವರ ೧೦ ಸಾಂವಿಧಾನಿಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು.
ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯ ಹಕ್ಕು, ಆದಿಮಸಂಜಾತ ಕೊಡವ ಬುಡಕಟ್ಟಿಗೆ ವಿಶ್ವರಾಷ್ಟç ಸಂಸ್ಥೆಯ ಮಾನ್ಯತೆ, ಕೊಡವ ಸಂಪ್ರದಾಯಿಕ ಜನಾಂಗೀಯ “ಸಂಸ್ಕಾರ ಗನ್” ಹಕ್ಕುಗಳನ್ನು ಸಿಖ್ಖರ “ಕಿರ್ಪಾನ್” ಗೆ ಸಮಾನವಾಗಿ ಸಂವಿಧಾನದ ೨೫ ಮತ್ತು ೨೬ನೇ ವಿಧಿಗಳ ಅಡಿಯಲ್ಲಿ ಧಾರ್ಮಿಕ ಮತ್ತು ಅಧ್ಯಾತ್ಮಿಕ ದಿನ ಬಳಕೆಯ ಅಂಶವಾಗಿ ರಕ್ಷಿಸಬೇಕು, ಕೊಡವ ತಕ್ಕ್ ಅನ್ನು ಸಂವಿಧಾನ ೮ನೇ ಶೆಡ್ಯೂಲ್‌ಗೆ ಸೇರಿಸುವುದು, ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕöÈತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು, ಜೀವನದಿ ಕಾವೇರಿಗೆ “ಕಾನೂನು ವ್ಯಕ್ತಿ ಸ್ಥಿತಿ”ಯೊಂದಿಗೆ ಜೀವಂತ ಘಟಕವನ್ನು ನೀಡಬೇಕು, ನಾಲ್ನಾಡಿನ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿನ ಅರಮನೆಯ ಸಂಚಿನಲ್ಲಿನ ಕೊಡವರ ರಾಜಕೀಯ ಹತ್ಯೆಗಳ ಸ್ಮಾರಕಗಳು, ಕೊಡವ ಶೌರ್ಯವನ್ನು ಪ್ರತಿಬಿಂಬಿಸುವ ಉಲುಗುಲಿ-ಸುಂಟಿಕೊಪ್ಪ ಮತ್ತು ಲಕ್ಕಡಿಕೋಟೆ, ಮುಳ್ಳುಸೋಗೆಯಲ್ಲಿ ಯುದ್ಧ ಸ್ಮಾರಕಗಳನ್ನು ಸ್ಥಾಪಿಸಬೇಕು, ದೇವಾಟ್‌ಪರಂಬ್‌ನಲ್ಲಿ ವಿಶ್ವರಾಷ್ಟç ಸಂಸ್ಥೆಯ ೧೯೬೪ರ ವೆನಿಸ್ ಡಿಕ್ಲರೇಷನ್ ಮತ್ತು ಸಂವಿಧಾನದ ೪೯ ವಿಧಿಯಂತೆ ಅಂತರರಾಷ್ಟಿçÃಯ ಕೊಡವ ನರಮೇಧದ ಸ್ಮಾರಕ ಸ್ಮಾರಕಗಳನ್ನು ನಿರ್ಮಿಸಬೇಕು, ಜನಸಂಖ್ಯಾ ಬದಲಾವಣೆಯನ್ನು ತಡೆಗಟ್ಟಲು, ನಮ್ಮ ಅನುವಂಶಿಕ ಸಮುದಾಯಿಕ ಆಸ್ತಿಗಳನ್ನು ಮತ್ತು ನಮ್ಮ ಅಧ್ಯಾತ್ಮಿಕ-ತಾತ್ಕಾಲಿಕ ಸ್ಥಾನಗಳಾದ ಮಂದ್, ದೇವಕಾಡ್, ತೂಟ್‌ಂಗಲ, ಕ್ಯಾಕೋಲಾ, ಈ ಭೂಮಿಯಲ್ಲಿ ನಮ್ಮ ಐತಿಹಾಸಿಕ ನಿರಂತರತೆಗೆ ಶಾಸನಬದ್ಧ ಅನುಮೋದನೆ ನೀಡಬೇಕು, ಹೊಸ ಸಂಸತ್ “ಕೇಂದ್ರ ವಿಸ್ತಾ”ದಲ್ಲಿ ಕೊಡವ ಪ್ರಾತಿನಿಧ್ಯವನ್ನು ನೀಡಬೇಕು, ಕೊಡವರ ಎಲ್ಲಾ ಭೂಮಿಯನ್ನು ವಿಶ್ವಸಂಸ್ಥೆಯ ಇಂಡಿಜಿನಸ್ ಜನರ ಆಸ್ತಿ ಮರುಪಡೆಯುವ ಕಾನೂನಿನ ಅಡಿಯಲ್ಲಿ ಅವರ ಮೂಲ ಆದಿಮಸಂಜಾತ ಕೊಡವ ವಾರಸುದಾರರಿಗೆ ಮರುಸ್ಥಾಪಿಸಬೇಕು ಎಂಬುದಾಗಿ ಈ ಸಂದರ್ಭ ಸರಕಾರವನ್ನು ಒತ್ತಾಯಿಸಲಾಯಿತು.
ಸತ್ಯಾಗ್ರಹದಲ್ಲಿ ಕಲಿಯಂಡ ಮೀನಾ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಪುಲ್ಲೇರ ಸ್ವಾತಿ ಕಾಳಪ್ಪ, ಚೋಳಪಂಡ ಜ್ಯೋತಿ ನಾಣಯ್ಯ, ಪಟ್ಟಮಾಡ ಲಲಿತಾ ಗಣಪತಿ, ಮುದ್ದಿಯಡ ಲೀಲಾವತಿ, ಪಚ್ಚಾರಂಡ ಶಾಂತಿ ಪೊನ್ನಪ್ಪ, ಕಲಿಯಂಡ ಪ್ರಕಾಶ್, ಪುಲ್ಲೇರ ಕಾಳಪ್ಪ, ಅಜ್ಜಿಕುಟ್ಟೀರ ಲೋಕೇಶ್, ಕಿರಿಯಮಾಡ ಶೆರಿನ್, ಬೊಟ್ಟಂಗಡ ಗಿರೀಶ್ ಪೆಮ್ಮಯ್ಯ, ಮಂದಪAಡ ಮನೋಜ್ ಮಂದಣ್ಣ, ಮಣವಟ್ಟಿರ ಚಿಣ್ಣಪ್ಪ, ಕೂಪದಿರ ಸಾಬು, ನಂದೇಟ್ಟಿರ ರವಿ ಸುಬ್ಬಯ್ಯ, ಚಂಙAಡ ಚಾಮಿ ಪಳಂಗಪ್ಪ, ನಂದಿನೆರವAಡ ವಿಜು, ಚೋಳಪಂಡ ನಾಣಯ್ಯ, ಮೇದುರ ಕಂಠಿನಾಣಿಯಪ್ಪ, ತೋಲಂಡ ಸೋಮಯ್ಯ, ಅವರೆಮಾದಂಡ ಚೆಂಗಪ್ಪ ಹಾಜರಿದ್ದರು.