ಮಡಿಕೇರಿ, ಜ. ೨೬: ನ್ಯಾಷ ನಲ್ ಸ್ಕೂಲ್ ಗೇಮ್ಸ್ ಫೆಡರೇ ಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿರುವ ೧೭ ವರ್ಷ ದೊಳಗಿನ ಹಾಕಿ ಪಂದ್ಯಾಟಕ್ಕೆ ಜಿಲ್ಲೆಯ ವಿದ್ಯಾರ್ಥಿ ಆಯ್ಕೆಯಾಗಿದ್ದಾರೆ. ಇಲ್ಲಿನ ಕೇಂದ್ರಿಯ ವಿದ್ಯಾಲಯದ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕೆ.ಟಿ. ದರ್ಶಿನಿ ತಾ. ೨೭ ರಿಂದ ೩೧ರವರೆಗೆ ರಾಂಚಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಪ್ರತಿನಿಧಿಸಲಿದ್ದಾರೆ. ಕೊಡಗಿನಿಂದ ಆಯ್ಕೆಯಾಗಿರುವ ಏಕೈಕ ಆಟಗಾರ್ತಿಯಾಗಿದ್ದು, ಕರ್ನಾಟಕದಿಂದ ಇಬ್ಬರು ಈ ಪಂದ್ಯಾಟದಲ್ಲಿ ಭಾಗವಹಿಸುತ್ತಿದ್ದಾರೆ. ದರ್ಶಿನಿ ಮರಗೋಡು ಗ್ರಾಮದ ಕಾನಡ್ಕ ದಿ. ತಿಲಕ್ ರಾಜ್ ಹಾಗೂ ಪ್ರಮೀಳ ದಂಪತಿ ಪುತ್ರಿ.