ಐಗೂರು, ಜ. ೨೭: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ಇವರ ವತಿಯಿಂದ ೧೭ನೇ ವರ್ಷದ ಸರ್ ಸಿ.ವಿ. ರಾಮನ್ ಆನ್‌ಲೈನ್ ವಿಜ್ಞಾನ ರಸಪ್ರಶ್ನೆಗೆ ಆಸಕ್ತ ವಿದ್ಯಾರ್ಥಿಗಳಿಂದ ಹೆಸರು ನೋಂದಾಯಿಸಿಕೊಳ್ಳಲು ಆಹ್ವಾನಿಸಲಾಗಿದೆ.

೮ನೇ, ೯ನೇ ಹಾಗೂ ೧೦ನೇ ತರಗತಿಗಳ ವಿದ್ಯಾರ್ಥಿಗಳು ಭಾಗವಹಿಸಬಹುದು. ಹೆಸರು ನೋಂದಾಯಿಸಿಕೊಳ್ಳಲು ತಾ. ೩೦ ವರೆಗೆ ಅವಕಾಶ ಕಲ್ಪಿಸಲಾಗಿದೆ. ಮೊದಲ ಹಂತದ ಪರೀಕ್ಷೆ ಫೆ. ೧ ರಂದು ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ. ಅಂತಿಮ ಹಂತದ ಪರೀಕ್ಷೆ ಫೆ. ರಂದು ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ.

ಫಲಿತಾಂಶ ಅದೇ ದಿನ ಸಂಜೆ ಪ್ರಕಟವಾಗಲಿದೆ. ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ರೂ. ೧೦,೦೦೦, ದ್ವಿತೀಯ ಸ್ಥಾನ ಪಡೆದವರಿಗೆ ರೂ. ೮,೦೦೦, ತೃತೀಯ ಸ್ಥಾನ ಪಡೆದವರಿಗೆ ರೂ. ೬,೦೦೦ ಹಾಗೂ ೧೦ ಸಮಾಧಾನಕರ ನಗದು ಬಹುಮಾನವಿರುತ್ತದೆ.

ಭಾಗವಹಿಸಿದ ಪ್ರತಿಯೊಬ್ಬರಿಗೂ ಅಭಿನಂದನಾ ಪತ್ರ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಳ್ಳಲು ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಸಿ.ಎಸ್. ಸುರೇಶ್ ಜಿಲ್ಲಾ ಸಂಯೋಜಕರು, ಮೊ. ೯೯೦೦೩೭೦೮೪೨ ಮತ್ತು ಜಿಲ್ಲಾ ಘಟಕದ ಅಧ್ಯಕ್ಷೆ ಎಂ.ಟಿ. ಸರಳ ಕುಮಾರಿ ಮೊ. ೯೪೮೩೭೮೫೭೨೯ ಹಾಗೂ ಜಿಲ್ಲಾ ಘಟಕದ ಕಾರ್ಯದರ್ಶಿ ಕುಮಾರ್ ಎನ್.ಎಸ್. ಮೊ. ೯೪೮೩೨೫೨೮೭೮ ಇವರನ್ನು ಸಂಪರ್ಕಿಸಬಹುದಾಗಿದೆ.