ನಾಪೋಕ್ಲು, ಜ. ೨೭: ಇಲ್ಲಿಗೆ ಸಮೀಪದ ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಶಾಲೆಯ ವಿದ್ಯಾರ್ಥಿಗಳು ಕರಾಟೆ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ಅಂತರರಾಷ್ಟಿçÃಯ ಶೋಲಿಂಗ್ ಕುಂಗ್ಫು ಸಂಸ್ಥೆಯ ವತಿಯಿಂದ ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಶಾಲೆಯಲ್ಲಿ ನಡೆದ ಕರಾಟೆ ಪರೀಕ್ಷೆಯಲ್ಲಿ ಒಂಭತ್ತನೇ ತರಗತಿಯ ವಿದ್ಯಾರ್ಥಿಗಳಾದ ಅಂಕಿತ್ ಬಿ.ಎ. ಬ್ಲಾö್ಯಕ್ ಬೆಲ್ಟ್ ಪ್ರಥಮ ಡಿಗ್ರಿ, ಲಕ್ಷಣ್ ಕೆ.ಎ. ಹಾಗೂ ಮೋನಿಷ್ ಮುತ್ತಣ್ಣ ಬ್ಲ್ಯಾಕ್ ಬೆಲ್ಟ್ ಪಡೆದುಕೊಂಡಿರುತ್ತಾರೆ. ಒಟ್ಟು ೩೩ ವಿದ್ಯಾರ್ಥಿಗಳು ಭಾಗವಹಿಸಿದ ಪರೀಕ್ಷೆಯಲ್ಲಿ ೧೧ ವಿದ್ಯಾರ್ಥಿಗಳು ಹಳದಿ, ೮ ವಿದ್ಯಾರ್ಥಿಗಳು ಆರೆಂಜ್, ಒಬ್ಬ ವಿದ್ಯಾರ್ಥಿ ಹಸಿರು, ೭ ವಿದ್ಯಾರ್ಥಿಗಳು ನೀಲಿ, ೬ ವಿದ್ಯಾರ್ಥಿಗಳು ಬ್ರೌನ್ ಬೆಲ್ಟ್ ಪಡೆದುಕೊಂಡರು.

ಈ ಸಂದರ್ಭದಲ್ಲಿ ಪರೀಕ್ಷಾರ್ಥಿಗಳಾಗಿ ಇಂಡಿಯನ್ ಗ್ರ‍್ಯಾಂಡ್ ಮಾಸ್ಟರ್ ಶಿಫು ಇಂದ್ರಜಿತ್, ಇಂಡಿಯನ್ ತರಬೇತುದಾರ ದೇವರಾಜ್, ಕೊಡಗು ಜಿಲ್ಲೆಯ ತರಬೇತುದಾರ ವೇಣು ಗೋಪಾಲ್, ಕರ್ನಾಟಕ ರಾಜ್ಯದ ತರಬೇತುದಾರ ನಾಟೋಳಂಡ ನಂಜುAಡ ಪಾಲ್ಗೊಂಡಿದ್ದರು. ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಾಟೋಳಂಡ ವಿಜು ಹಾಗೂ ಮುಖ್ಯ ಶಿಕ್ಷಕರಾದ ಕುದುಪಜೆ ಕವನ್ ಮಾರ್ಗದರ್ಶನ ನೀಡಿದ್ದರು.