(ನಿನ್ನೆಯ ಸಂಚಿಕೆಯಿAದ) ಬಿಸಿಲಿನ ಬೇಗೆಗೆ ಟರ್ಫ್ ಮೇಲ್ಮೆöÊ ಉಷ್ಣತೆಯು ಪಕ್ಕದ ವಾತಾವರಣದ (ಂmbieಟಿಣ) ಉಷ್ಣತೆಗಿಂತ ೪೦ಈ ರಷ್ಟು ಹೆಚ್ಚಿರಬಹುದು. ಈ ಅಧಿಕ ಉಷ್ಣತೆಯಲ್ಲಿ ಆಡಿದರೆ, ಆಟ ಶುರು ಮಾಡಿದ ೧೮ ನಿಮಿಷಗಳಲ್ಲೇ ಕಾಲಿನ ಸ್ನಾಯುಗಳು ದಣಿದು ಆಟಗಾರರಿಗೆ ಶಾರೀರಿಕ ದಣಿವಿನ ಅರಿವಾಗಬಹುದು. ಆದ್ದರಿಂದಲೇ ಹೆಚ್ಚಾದ ಉಷ್ಣತೆಯನ್ನು ಪರಿಸರದ ಉಷ್ಣತೆಗೆ ಸರಿದೂಗಿಸಲು ಆಟ ಪ್ರಾರಂಭಿಸುವುದಕ್ಕೆ ಮೊದಲು ಸಾಧಾರಣ ೧೫೦೦ ಗ್ಯಾಲನ್ಸ್ ನೀರನ್ನು ಟರ್ಫ್ ಮೇಲೆ ಸಿಂಪಡಿಸಬೇಕಾಗುತ್ತದೆ. ಬಿಸಿಲು ಅತಿಯಾಗಿದ್ದರೆ ಮಧ್ಯಂತರದ ಬಿಡುವಿನಲ್ಲಿಯೂ ಪುನಃ ನೀರನ್ನು ಸಿಂಪಡಿಸಬೇಕಾಗುತ್ತದೆ. ಆಟಗಾರರ ಶೂಗಳ ತಳಭಾಗಕ್ಕೂ ಒದ್ದೆಯಾಗದ ಟರ್ಫ್ನ ಮೇಲ್ ಪದರಿಗೂ ಆಡುವಾಗ ಅವುಗಳ ವಿಮೋಚನಾ ಗುಣಕ (ಖeಟeಚಿse ಅoiಜಿಜಿeಛಿieಟಿಣ) ಕಡಿಮೆಯಾಗಿ ಪಾದದ ಮತ್ತು ಮೊಣಕಾಲಿನ ಸಂಧುಗಳ (ಎoiಟಿಣs) ಸುಲಲಿತ ಚಲನೆಯಿಂದಾಗಿ ಕಡಿಮೆ ಶ್ರಮವಿದ್ದು ಶರೀರದ ಭಾರ ಹೊರುವ ಸಂಧುಗಳು ಹಾಗೂ ಕೀಲುಗಳು ನೋವುರಹಿತವಾಗಿ ಸುರಕ್ಷಿತವಾಗಿರುವುದು. ಆದ್ದರಿಂದ ತತ್ಸಂಬAಧಿತ ಸ್ನಾಯುಗಳಿಗೆ ಬೇಗನೆ ದಣಿವು ಅರಿಯುವುದಿಲ್ಲ.
ಸಿಂಥೆಟಿಕ್ ಟರ್ಫ್ ಮೇಲೆ ಆಡುವಾಗ ಚೆಂಡು ಮೈದಾನದ ಹೊರ ಹೋಗುವುದು ಕಡಿಮೆಯಾಗುವುದು ಏಕೆಂದರೆ ಃehಚಿviouಡಿ oಜಿ ಣhe bಚಿಟಟ oಟಿ ಣhe sಥಿಟಿಣheಣiಛಿ suಡಿಜಿಚಿಛಿe ತಿiಟಟ be veಡಿಥಿ ಣಡಿue ಚಿಟಿಜ heಟಿಛಿe ಣhe momeಟಿಣ is quiಣe ಠಿಡಿeಜiಛಿಣಚಿbಟe ಜಿoಡಿ ಣhe ಠಿಟಚಿಥಿeಡಿs ನಿಯಮಗಳ ಉಲ್ಲಂಘನೆಗಳು ಕಡಿಮೆಯಾಗಿ ರೆಫ್ರಿಗಳು ಕಡಿಮೆ ಶ್ರಮ ಗೊಳ್ಳುವರು. ಆದ್ದರಿಂದ ಮೈದಾನದಲ್ಲಿ ಆಟದ ಸಮಯ ಸಾಧಾರಣ ೧೨ ರಿಂದ ೧೫% ರಷ್ಟು ಹೆಚ್ಚಾಗುತ್ತದೆಂದು ರಿಸರ್ಚ್ ತಿಳಿಸಿರುವುದು. ಒದ್ದೆಯಾದ ಮೈದಾನ ಮೇಲ್ಮೆöÊ ಪದರಿನ ಆರ್ದತೆ (ಊumiಜiಣಥಿ) ಮತ್ತು ಆವಿಯಾಗುವಿಕೆಯಿಂದ ಆಟಗಾರರ ಶರೀರದ ತೂಕದಲ್ಲಿ ವ್ಯತ್ಯಾಸ ಕಂಡು ಬಂದು ಮಾನಸಿಕ ದೃಢತೆಗೆ ಕೊರತೆಯಾಗುವುದನ್ನು ತಡೆಯುವುದು. ವಿಕೆಂದರೆ ಆಟಗಾರರಿಗೆ ಗಾಯ ಆಗುವುದಿಲ್ಲ ಏಕೆಂದರೆ ಒದ್ದೆಯಾದ ಮೇಲ್ಮೆöÊ ಪದರು ತಡೆಯುವುದು. ಮೃದುವಾದ ಎಲುಬಿಗೆ (ಛಿಚಿಡಿಣiಟಚಿge) ಮತ್ತು ಸ್ನಾಯು ಬಂಧಕ (ಖಿeಟಿಜoಟಿs) ಮತ್ತು ಅಸ್ಥಿ ಬಂದಕ (ಐigಚಿmeಟಿಣs) ಗಳಿಗೆ ಘಾಸಿಯಾಗುವುದು ಅತ್ಯಂತ ಕಡಿಮೆ.
ಸಾಮಾನ್ಯವಾದ ಸರಳ ಘಾಸಿ ಎಂದರೆ ೩೦% ರಷ್ಟು ಮೂಕ ಪೆಟ್ಟು ಅಥವಾ ಮೇಲ್ ಉಜ್ಜುವಿಕೆ.
ಹತ್ತು ಹೆಚ್ಚು ಪೆನಾಲ್ಟಿ ಕಾರ್ನರ್ಗಳು ದೊರಕಿ ಕಡಿಮೆ ಸಮಯದಲ್ಲಿ ತೆಗೆದುಕೊಳ್ಳಬಹುದು. ಗೋಲ್ ಗಳಿಸುವ ಅವಕಾಶಗಳು ಹೆಚ್ಚಾಗಬಲ್ಲದು.
ಸಿಂಥೆಟಿಕ್ ಟರ್ಫ್ ಹಾಸಿದ ಮೈದಾನದ ಸಂರಕ್ಷಣೆ ಮತ್ತು ನಿರ್ವಹಣೆ ಸುಲಭ. ಸುರಕ್ಷತೆಗಾಗಿ ನೀರು ಸಿಂಪಡಿಸುವುದಕ್ಕೆ ಮೊದಲು ಅuಛಿಣioಟಿ Sತಿeeಠಿeಡಿ) ಅನ್ನು ಲಘುವಾಗಿ ಟರ್ಫ್ ಮೇಲೆ ಓಡಿಸುವುದರಿಂದ ಮೈದಾನದಲ್ಲಿ ಇರಬಹುದಾದ ಕಸಕಡ್ಡಿ, ಧೂಳು, ಕ್ರಿಮಿಕೀಟಗಳು ನಿವಾರಿಸಬಹುದು. ನಂತರ ನೀರನ್ನು ಸಿಂಪಡಿಸಿದರೆ ಮೇಲ್ಮೆöÊ ಆಡಲು ಸುರಕ್ಷಿತವಾಗಿ ನೋಡಲು ನಯನ ಮನೋಹರವಾಗಿ ಕಾಣಬಲ್ಲದು. ಅಂತಿಮವಾಗಿ ಟರ್ಫ್ ಮೇಲಿನ ಆಟ ಮಳೆ ಬಂದರೂ ಬಿಸಿಲಿದ್ದರೂ ಹಿಮ ಬಿದ್ದರೂ ನಿರಾತಂಕವಾಗಿ ಸಾಗಬಲ್ಲದು ಎಂದು ಕೆನಡಾದ ಅನ್ವೇಷಣಾ ಗುಂಪು ತಿಳಿಸಿರುವರು.
ಈ ಮೈದಾನ ಭಾರತೀಯ ಆಟದ ಶೈಲಿಗೆ ಬಹಳಷ್ಟು ಸೂಕ್ತ ಹಾಗೂ ಪೂರಕವಾದದ್ದೆಂದು ಅನುಭವಿಸಿದ ಆಟಗಾರರು ಮಾತ್ರವಲ್ಲದೆ ತರಬೇತುದಾರರು (ಟೈರ್ಸ್) ರೆಫ್ರಿಯವರು, ಫಿಟ್ನೆಸ್ ಪರಿಣಿತರು, ಮನೋಶಾಸ್ತçಜ್ಞರು ಮತ್ತು ಡಯಟೀಶಿಯನ್ಸ್ ಸಹಮತ ಪ್ರಕಟಿಸಿರುವರು.
ಪ್ರಸ್ತುತ ಸಮಯದಲ್ಲಿ ಎಲ್ಲಾ ರಾಷ್ಟಿçÃಯ, ಅಂತರರಾಷ್ಟಿçÃಯ ಮಟ್ಟಗಳ ಹಾಕಿ ಪಂದ್ಯಾಟಗಳು ಸಿಂಥೆಟಿಕ್ ಟರ್ಫ್ ಮೇಲೆ ಆಡುತ್ತಿರುವರು. ೧೯೭೬ ರ ಮೌಂಟ್ರ್ ರಿಯಲ್ ಒಲಂಪಿಕ್ಸ್ನಲ್ಲಿ ಮೊದಲನೆಯದಾಗಿ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಹಾಕಿ ಆಡಿಸಿದರು. ಈಗ ಎಳೆ ವಯಸ್ಸಿನ ಆಟಗಾರರು ಕೂಡ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಆಡಲು ಇಚ್ಚಿಸುತ್ತಾರೆ. ಕೊಡಗಿನಲ್ಲಿ ಪ್ರಸ್ತುತ ಪೊನ್ನಂಪೇಟೆ, ಮಡಿಕೇರಿ ಮತ್ತು ಸೋಮವಾರಪೇಟೆಯಲ್ಲಿ ಟರ್ಫ್ ಹಾಕಿ ಮೈದಾನಗಳಿವೆ. ಈಗಲೂ ಈ ಹವಾಮಾನದಲ್ಲೂ ಈ ಮೈದಾನಗಳಲ್ಲಿ ಹಾಕಿ ಪಂದ್ಯಾಟಗಳು ನಡೆಯುತ್ತಿರುತ್ತವೆ. ಏಕೆಂದರೆ ಹಾಕಿ ಆಟದ ಸಂಘಟಕರಿಗೆ ಈ ಮೈದಾನಗಳಲ್ಲಿ ಆಡಿಸುವುದರಿಂದ ದೊರಕುವ ಸಂಪೂರ್ಣ ಅನುಕೂಲತೆ ಸೌಲಭ್ಯ ಸಾಮೀಪ್ಯ, ಖರ್ಚಿನ ಉಳಿತಾಯ ಮತ್ತು ಮಾನಸಿಕ ಹಾಗೂ ಶಾರೀರಿಕ ಒತ್ತಡಗಳ ನಿವಾರಣೆಯ ಅರಿವಾಗುವುದು.
ಮೇಲಿನ ಎಲ್ಲಾ ವಿಚಾರಗಳನ್ನು ಅವಲೋಕಿಸಿದರೆ ಕೊಡವ ಕುಟುಂಬ ಹಾಕಿ ಹಬ್ಬವನ್ನು ನಿರಾತಂಕ ಹಾಗೂ ನಿರಂತರವಾಗಿ ಆಚರಿಸುವಂತಾಗ ಬೇಕಾದರೆ ಒಂದು ಸಾಧಿಸಬಲ್ಲ ವಾಸ್ತವಿಕ ಕಾರ್ಯ ಯೋಜನೆ (Pಡಿಚಿgmಚಿಣiಛಿ ತಿoಡಿಞಚಿbಟe ಠಿಟಚಿಟಿ) ಯನ್ನು ಈಗಿನಿಂದಲೇ ರೂಪಿಸಲ್ಪಟ್ಟರೆ ಬೇಗನೆ ಕಾರ್ಯಸಿದ್ಧಿ ಆಗಬಲ್ಲದು.
೧. ಮೈದಾನ: ವೈಪರಿತ್ಯ ಹವಾಮಾನದ ಗೊಂದಲವಿಲ್ಲದೆ ನಿರಾತಂಕ ಹಾಗೂ ನಿರಂತರವಾಗಿ ಆಡಿಸಬಲ್ಲ ಮೈದಾನವೆಂದರೆ ಸಿಂಥೆಟಿಕ್ ಟರ್ಫ್ ಹಾಸಿದ ಮೈದಾನವೆಂದು ಅರಿತಿರುವೆವು.
ಕೊಡಗಿನ ಪೊನ್ನಂಪೇಟೆ, ಮಡಿಕೇರಿ ಮತ್ತು ಸೋಮವಾರಪೇಟೆ ಪಟ್ಟಣದಲ್ಲಿರುವ ಸಿಂಥೆಟಿಕ್ ಟರ್ಫ್ ಮೈದಾನಗಳನ್ನು ಹಾಕಿ ಹಬ್ಬ ನಡೆಸಲು ತಾತ್ಕಾಲಿಕವಾಗಿ ಹೇಗೆ ಉಪಯೋಗಿಸಿಕೊಳ್ಳಬಹುದೆಂಬುದಕ್ಕೆ ಒಂದು ಸಲಹೆ ಏನೆಂದರೆ :
ಹಾಕಿ ಹಬ್ಬದಲ್ಲಿ ಸಾಮಾನ್ಯವಾಗಿ ಕೊಡಗಿನ ಎಲ್ಲಾ ತಾಲೂಕುಗಳಿಂದ ಕೊಡವ ಕುಟುಂಬಗಳು ಹೆಚ್ಚು-ಹೆಚ್ಚಾಗಿ ಭಾಗವಹಿಸುತ್ತವೆ. ಆದ್ದರಿಂದ ಆಯಾ ತಾಲೂಕುಗಳಲ್ಲಿ ನಿಂತಿರುವ ಕುಟುಂಬ ತಮಗೆ ಸಮೀಪವಿರುವ ತಾಲೂಕಿನಲ್ಲಿರುವ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಪ್ರಿಲಿಮಿನರಿ ರೌಂಡ್ಸ್ (ಫ್ರೀ ಕ್ವಾಟರ್, ಕ್ವಾಟರ್, ಸೆಮಿ ಫೈನಲ್ಸ್ ಮತ್ತು ಫೈನಲ್ಸ್ ಹೊರತುಪಡಿಸಿ) ಆಟಗಳನ್ನು ಆಡಿಸಲು ಸಾಧ್ಯವಾಗಬಲ್ಲದಾದರೆ ಸಂಘಟಕರಿಗೆ, ರೆಫ್ರಿಗಳಿಗೆ ಆಟಗಾರರಿಗೆ ಹಣ ಉಳಿತಾಯವಾಗಬಲ್ಲದು, ಸಮಯ ಉಳಿತಾಯವಾಗಬಲ್ಲದು, ದೈಹಿಕ ಮತ್ತು ಮಾನಸಿಕ ಶ್ರಮ ಕಡಿಮೆಯಾಗಬಲ್ಲದು ಹಾಗೆಯೇ ಪ್ರೇಕ್ಷಕರು ಆ ಭಾಗದಲ್ಲಿ ಹೆಚ್ಚಾಗಬಹುದು. ಯಾವ ಮೈದಾನದಲ್ಲಿ ಅಂತಿಮ ಪಂದ್ಯಾಟಗಳು ನಡೆಸಲು ತೀರ್ಮಾನಿಸಿದ್ದಾರೆಯೋ ಅಲ್ಲಿ ಮಾತ್ರ ಗ್ಯಾಲರಿ ರಚಿಸಬಹುದು.
ಹವಾಮಾನದ ವೈಪರೀತ್ಯವಿದ್ದರೂ ಯಾವುದೇ ಅಡೆತಡೆ ಇಲ್ಲದೆ ನಿರಾತಂಕವಾಗಿ ವರ್ಷದ ಯಾವುದೇ ಸಮಯದಲ್ಲಿ ನಿರಂತರವಾಗಿ ಒಂದೇ ಸ್ಥಳದಲ್ಲಿ ಆಡಿಸಬಹುದಾದ ಶಾಶ್ವತವಾದ ಸಲಹೆ ಎಂದರೆ ಕೊಡಗಿನ ಒಂದೇ ಸ್ಥಳದಲ್ಲಿ ಎರಡು ಸಿಂಥೆಟಿಕ್ ಟರ್ಫ್ ಹಾಸಿದ ಹಾಕಿ ವೈದಾನಗಳು ಮತ್ತು ಅವುಗಳ ಸುತ್ತಲೂ ಗ್ಯಾಲರಿಗಳನ್ನು ಶಾಶ್ವತವಾಗಿ ನಿರ್ಮಿಸಿಕೊಳ್ಳುವುದು.
ಕೊಡವರದ್ದೇ ಆದ ಫೆಡರೇಶನ್ ಆಫ್ ಕೊಡವ ಸಮಾಜಾಸ್ ಸಂಸ್ಥೆಯ ಸುಮಾರು ೨೦ ಏಕರೆಗಳಷ್ಟು ವಿಸ್ತಾರ ಸ್ಥಳ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಬಾಳುಗೋಡಿನಲ್ಲಿ ಇರುವುದು. ಇದರಲ್ಲಿ ಅಕ್ಕಪಕ್ಕದಲ್ಲಾಗುವ ಎರಡು ಅಂತರರಾಷ್ಟಿçÃಯ ಅಳತೆಯ ಹಾಕಿ ಮೈದಾನದ ಸಮತಟ್ಟಾದ ಸ್ಥಳವಿರುವುದು. ಈ ಫೆಡರೇಷನ್ರವರೂ ಕೂಡ ಕೊಡವ ಅಂತರ ಕುಟುಂಬ ಹಾಕಿ ಹಬ್ಬವನ್ನು ೧೯೨೮ರಿಂದ ತಮ್ಮ ಸಂಸ್ಥೆಯ ಆವರಣದಲ್ಲೇ ಶಾಶ್ವತವಾಗಿ ನಡೆಸುವಂತೆ ಅಭಿಪ್ರಾಯ ಪಟ್ಟಿರುವರೆಂದು ಮಾಧ್ಯಮಗಳು ತಿಳಿಸಿವೆ. (ಮುಂದುವರಿಯುವುದು)
- ಡಾ. ಕಲ್ಯಾಟಂಡ ಬಿ. ಚಿಣ್ಣಪ್ಪ, ಗೋಣಿಕೊಪ್ಪ