ಮಡಿಕೇರಿ, ಜ. ೨೭; ಮಡಿಕೇರಿ ಹೊರವಲಯದ ಪ್ರವಾಸಿ ತಾಣವಾದ ಮಾಂದಲ್ಪಟ್ಟಿಗೆ ಬಾಡಿಗೆ ಜೀಪ್ನಲ್ಲಿ ತೆರಳಿದ್ದ ಪ್ರವಾಸಿಗರಿಂದ ದುಬಾರಿ ಹಣ ವಸೂಲಿ ಮಾಡಿದ ಜೀಪ್ ಚಾಲಕನ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಬೆಂಗಳೂರಿನಿAದ ಮಡಿಕೇರಿಗೆ ಪ್ರವಾಸ ಬಂದಿದ್ದ ಅಂಕಿತ್ ಎಂಬವರು ಬಸ್ ನಿಲ್ದಾಣದಿಂದ ಮಾಂದಲ್ಪಟ್ಟಿಗೆ ಬಾಡಿಗೆ ಜೀಪ್ನಲ್ಲಿ ತೆರಳಿದ್ದು, ಜೀಪ್ ಚಾಲಕ ರೂ.೨೫೦೦ರ ಬದಲಿಗೆ ೪೦೦೦ ಬಾಡಿಗೆ ವಸೂಲಿ ಮಾಡಿದ್ದಲ್ಲದೆ ಗೇಟ್ನಲ್ಲಿ ಅರಣ್ಯ ಇಲಾಖೆಗೆ ನೀಡಲೆಂದು ಮತ್ತೆ ರೂ.೫೦೦ ವಸೂಲಿ ಮಾಡಿರುವ ಬಗ್ಗೆ ಅಂಕಿತ್ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದು ವೈರಲ್ ಆಗಿ ಪೊಲೀಸ್ ಇಲಾಖೆಯ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸಂಚಾರಿ ಠಾಣಾಧಿಕಾರಿ ಶ್ರೀಧರ್ ನೇತೃತ್ವದಲ್ಲಿ ಜೀಪುಗಳ ತಪಾಸಣೆ ನಡೆಸಿದರು. ನಂತರ ಗ್ರಾಮಾಂತರ ಠಾಣೆಗೆ ಜೀಪ್ ಚಾಲಕ ಶವಿನ್ ಕುಮಾರ್ ಎಂಬಾತನನ್ನು ಕರೆಸಿ ವಿಚಾರಣೆ ನಡೆಸಲಾಗಿದೆ. ಈ ಸಂದರ್ಭ ವಾಹನದ ದಾಖಲೆಗಳು ಸರಿ ಇಲ್ಲದ್ದನ್ನು ಮನಗಂಡು, ವೇಗದ ಚಾಲನೆ, ನಿಯಮ ಉಲ್ಲಂಘನೆಯಡಿ ಬಿಎಸ್ಎಸ್ ಕಲಂ ೨೮೧ ಹಾಗೂ ಐಎಂವಿ ಕಾಯಿದೆ ೧೯೨ (ಎ) ಅಡಿ ಮೊಕದ್ದಮೆ ದಾಖಲಿಸಲಾಗಿದೆ. ಜೀಪನ್ನು ವಶಪಡಿಸಿಕೊಳ್ಳಲಾಗಿದೆ. ಮಾಂದಲ್ಪಟ್ಟಿಗೆ ತೆರಳುವ ಜೀಪ್ಗಳು ನಿಯಮಗಳನ್ನು ಉಲ್ಲಂಘನೆ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವದೆಂದು ಗ್ರಾಮಾಂತರ ಪೊಲೀಸ್ ನಿರೀಕ್ಷಕ ಚಂದ್ರಶೇಖರ್ ಅವರು ತಿಳಿಸಿದ್ದಾರೆ.
ಹಣ ವಾಪಸ್..!
ಈ ನಡುವೆ ಅಂಕಿತ್ ಹಾಕಿದ್ದ ವೀಡಿಯೋ ವೈರಲ್ ಆಗಿ ಸಾರ್ವಜನಿಕರು, ಸಂಘ ಸಂಸ್ಥೆಗಳಿAದ ಆಕ್ರೋಶ ಹೊರ ಹೊಮ್ಮುತ್ತಿದ್ದಂತೆ ಹೆಚ್ಚಿಗೆ ವಸೂಲಿ ಮಾಡಿದ್ದ ಹಣವನ್ನು ಶವಿನ್ ಕುಮಾರ್ ಪ್ರವಾಸಿ ಅಂಕಿತ್ ಅವರ ಖಾತೆಗೆ ಗೂಗಲ್ ಪೇ ಮೂಲಕ ಮರಳಿಸಿದ್ದಾನೆ.
ಆರೋಪಿ ವಿಚಾರಣೆ
ವೀಡಿಯೋ ವೈರಲ್ ಬೆನ್ನಲ್ಲೆ ಪೊಲೀಸರು ಚಾಲಕ ಶವಿನ್ ಕುಮಾರ್ನನ್ನು ಪತ್ತೆಹಚ್ಚಿ ವಿಚಾರಣೆ ಮಾಡಿದ್ದಾರೆ. ಪ್ರಾಥಮಿಕ ತನಿಖೆಯಿಂದ ಹೆಚ್ಚಿನ ಹಣ ವಸೂಲಿ ಮಾಡಿರುವುದು ಕಂಡು ಬಂದಿದೆ. ವಾಹನ ದಾಖಲೆ ಪರಿಶೀಲನೆ ವೇಳೆ ವೈಟ್ ಬೋರ್ಡ್ ವಾಹನವಾಗಿದ್ದು, ಅದರ ನಂಬರ್ ಪ್ಲೇಟ್ ಹಳದಿ ಬೋರ್ಡ್ ಹಾಕಿ ಬಾಡಿಗೆ ಮಾಡುತ್ತಿರುವುದು ಕಂಡು ಬಂದಿದೆ.