*ಗೋಣಿಕೊಪ್ಪ, ಜ. ೨೭: ಕೇರಳ ರಾಜ್ಯದ ಲಾಟರಿ ಡ್ರಾ ಫಲಿತಾಂಶ ಆಧಾರದ ಮೇಲೆ ಜೂಜು ನಡೆಸುತ್ತಿದ್ದ ಜಾಲವನ್ನು ಗೋಣಿಕೊಪ್ಪ ಪೊಲೀಸರು ಭೇದಿಸಿದ್ದಾರೆ.
ರಾಜ್ಯದಲ್ಲಿ ನಿಷೇಧಿತ ಕೇರಳ ಲಾಟರಿ ದಂಧೆ ನಡೆಸುತ್ತಿದ್ದ ಆರೋಪಿ ಟಿ.ಎಸ್. ವಿನೋದ್‌ನನ್ನು ಪ್ರಕರಣಕ್ಕೆ ಸಂಬAಧಿಸಿದAತೆ ಬಂಧಿಸಲಾಗಿದೆ. ಕೇರಳ ರಾಜ್ಯದ ಲಾಟರಿ ಡ್ರಾ ಫಲಿತಾಂಶದ ಆಧಾರದ ಮೇಲೆ ಅದೃಷ್ಟ ಸಂಖ್ಯೆಗಳ ೩ ಅಂಕಿ ಚೀಟಿಯನ್ನು ಬರೆದು ಗಿರಾಕಿಗಳಿಂದ ಹಣ ವಸೂಲಿ ಮಾಡಿ ದಂಧೆ ನಡೆಯುತ್ತಿತ್ತು.
ಈ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ಗೋಣಿಕೊಪ್ಪ ವಾಹನ ನಿಲ್ದಾಣದ ಸಮೀಪದ ಕೊಠಡಿಯಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಲಾಟರಿ ದಂಧೆಯ ಮೇಲೆ ನಿಗಾ ಇಟ್ಟ ಪೊಲೀಸರು ದಾಳಿ ನಡೆಸಿ ಮೂರು ಸಾವಿರ ಮೌಲ್ಯದ ಮೊಬೈಲ್ ಮತ್ತು ೬೦೦ ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿ ವಿನೋದ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ತಲೆಮೆರೆಸಿಕೊAಡಿರುವ ಮತ್ತೋರ್ವ ಆರೋಪಿ ವಿನೇಶ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಗೋಣಿಕೊಪ್ಪ ಪಟ್ಟಣದಲ್ಲಿ ಆನ್‌ಲೈನ್ ಲಾಟರಿ ದಂಧೆ ನಿರಾತಂಕವಾಗಿ ನಡೆಯುತ್ತಿದ್ದು, ಇದು ಪ್ರತಿದಿನ ಐದು ಶೋಗಳಂತೆ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ.
ಡಿವೈಎಸ್ಪಿ ಮಹೇಶ್‌ಕುಮಾರ್ ಅವರ ಮಾರ್ಗದರ್ಶನ, ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ್ ಆರ್. ಮುಧೋಳ್, ಠಾಣಾಧಿಕಾರಿ ಪ್ರದೀಪ್‌ಕುಮಾರ್ ಬಿ.ಕೆ. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ, ಮಹೇಂದ್ರ, ತನುಕುಮಾರ್, ಗಿರೀಶ್ ಮತ್ತು ಭರತ್ ಭಾಗವಹಿಸಿದ್ದರು.