ಕಡಂಗ, ಜ. ೨೭: ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬೆಂಗಳೂರಿನ ರೋಹನ್ ಫೌಂಡೇಶನ್ ವತಿಯಿಂದ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರೋಹನ್ ಕೇರ್ ಫೌಂಡೇಶನ್ ಕೊಡಗು ಜಿಲ್ಲಾ ಘಟಕದ ನಿರ್ದೇಶಕ, ಕಾಫಿ ಬೆಳೆಗಾರರು ಹಾಗೂ ಹಳೆಯ ವಿದ್ಯಾರ್ಥಿಗಳೂ ಆದ ಕೋಡಿರ ಟಿ. ರಾಬಿನ್ ಗಣಪತಿ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಣೆ ಮಾಡಿದರು.

ಈ ಸಂದರ್ಭ ಕ್ರೀಡಾಪಟು, ಕಾಫಿ ಬೆಳೆಗಾರರಾದ ನಡಿಕೇರಿಯಂಡ ಅರ್ಜುನ್ ಕಾವೇರಪ್ಪ, ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಕ್ರೀಡಾ ಸಾಮಗ್ರಿಗಳನ್ನು ಒದಗಿಸಿದ ಫೌಂಡೇಶನ್‌ನ ಮುಖ್ಯಸ್ಥ ಮಂಜುನಾಥ್, ಮುಖ್ಯ ಶಿಕ್ಷಕಿ ಹೇಮಾವತಿ ಹೆಚ್.ಎ., ಶಿಕ್ಷಕರಾದ ಶೋಭಾ, ವತ್ಸಲ, ಬಬಿತ ಹಾಗೂ ಸೈಬನಿಸಾ ಹಾಜರಿದ್ದರು.