ವೀರಾಜಪೇಟೆ, ಜ. ೨೭: ವೀರಾಜಪೇಟೆ ತಾಲೂಕು ಕೆದಮುಳ್ಳೂರಿನಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಕೆದಮುಳ್ಳೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ಲಬ್ ಮಹೇಂದ್ರ ಕಡೆಗೆ ತೆರಳುವ ಸಾರ್ವಜನಿಕ ರಸ್ತೆಯ ಅಭಿವೃದ್ಧಿಗಾಗಿ ರೂ. ೧೦ ಲಕ್ಷಗಳನ್ನು ಒದಗಿಸಿದ್ದು, ಕಾಮಗಾರಿ ಪ್ರಾರಂಭಿಸಲು ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ನೂರಾರು ಜನರು ಓಡಾಡುವ ಈ ರಸ್ತೆಯನ್ನು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಸಾರ್ವಜನಿಕರ ಕೋರಿಕೆ ಮೇರೆಗೆ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಿದ್ದೇನೆ. ಅನುದಾನವನ್ನು ಸದುಪಯೋಗಪಡಿಸಿಕೊಂಡು ಉತ್ತಮ ರಸ್ತೆ ನಿರ್ಮಾಣವಾಗು ವಂತಾಗಲಿ ಎಂದು ಹೇಳಿದರು. ಈ ಸಂದರ್ಭ ವೀರಾಜಪೇಟೆ ಕೆಡಿಪಿ ಸದಸ್ಯ ಮಾಳೇಟಿರ ಪ್ರಶಾಂತ್, ವಲಯ ಅಧ್ಯಕ್ಷ ನಡಿಕೇರಿಯಂಡ ಮಹೇಶ್ ಪಂಚಾಯಿತಿ ಅಧ್ಯಕ್ಷ ಜೇಫ್ರಿ ಉತ್ತಪ್ಪ, ಜಲ ಚಂಗಪ್ಪ, ಮಿಟ್ಟು ಅಯ್ಯಪ್ಪ, ಅಮಿತ್ ಪಾಲೆಂಗಡ, ಮಿತಲ್ತಂಡ ಇಸ್ಮಾಯಿಲ್, ಆಲಿ, ಡ್ಯಾನಿ, ಜಿತನ್, ಗುತ್ತಿಗೆದಾರ ರಂಜು ಮಾದಪ್ಪ, ರಾಜ, ಮಹಾದೇವ, ಮಂಜುನಾಥ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.