ಸೋಮವಾರಪೇಟೆ, ಜ. ೨೭: ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ, ಜಿಲ್ಲಾಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಆನ್‌ಲೈನ್ ಜಾನಪದ ಗೀತೆಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ತಾಲೂಕು ಅಧ್ಯಕ್ಷ ಅಪ್ಪುಡ ಸುಧೀಶ್ ಕುಶಾಲಪ್ಪ ತಿಳಿಸಿದ್ದಾರೆ.
ಸ್ಪರ್ಧೆಯು ಸೋಮವಾರಪೇಟೆ ತಾಲೂಕು ವ್ಯಾಪ್ತಿಗೆ ಸೀಮಿತವಾಗಿದ್ದು, ಭಾಗವಹಿಸುವ ವಿದ್ಯಾರ್ಥಿಗಳು ಒಂದರಿAದ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಆಸಕ್ತ ವಿದ್ಯಾರ್ಥಿಗಳು, ತಮ್ಮ ಹೆಸರು, ಶಾಲೆ ಮತ್ತು ತರಗತಿಯನ್ನು ಉಲ್ಲೇಖಿಸಿ, ಯಾವುದೇ ಮ್ಯೂಸಿಕ್ ಬಳಸದೆ, ೪ ನಿಮಿಷದ ಒಳಗಾಗಿ ಜಾನಪದ ಗೀತೆಗಳನ್ನು ಹಾಡಿ, ರೆಕಾರ್ಡ್ ಮಾಡಿದ ವೀಡಿಯೋವನ್ನು ಸಮಿತಿಯ ಉಪಾಧ್ಯಕ್ಷೆ ಬಿ.ಪಿ. ಸುಮತಿ ಅವರಿಗೆ ವಾಟ್ಸಾö್ಯಪ್ (ಮೊ: ೯೮೪೪೭೯೪೯೭೨) ಮೂಲಕ ಫೆ. ೫ ರೊಳಗೆ ಕಳುಹಿಸಬೇಕು.
ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಮತ್ತು ಎಲ್ಲರಿಗೂ, ಅಭಿನಂದನಾ ಪತ್ರ ನೀಡಲಾಗುವುದು ಎಂದು ಅಪ್ಪುಡ ಸುಧೀಶ್ ಕುಶಾಲಪ್ಪ ತಿಳಿಸಿದ್ದಾರೆ.