ಕೂಡಿಗೆ, ಜ. ೨೭: ಕೂಡಿಗೆ ಸೈನಿಕ ಶಾಲೆಯಲ್ಲಿ ಸೇನಾ ದಿನಾಚರಣೆಯನ್ನು ಆಚರಿಸಲಾಯಿತು.
ದೇಶಭಕ್ತಿಯ ಉತ್ಸಾಹದೊಂದಿಗೆ ದೇಶದ ಸ್ವಾತಂತ್ರö್ಯ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವಲ್ಲಿ ತಮ್ಮ ಜೀವನವನ್ನು ಸಮರ್ಪಿಸಿರುವ ಭಾರತೀಯ ಸೇನೆಯ ಶೌರ್ಯ, ತ್ಯಾಗ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಯಿತು.
ಮೊದಲಿಗೆ ಕಟಾರಿ ನಿಲಯದ ವಿದ್ಯಾರ್ಥಿಗಳು ಪ್ರೇರಣಾದಾಯಕ ಗೀತೆಯ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ದಿನದ ಸುಭಾಷಿತ, ಕವನವಾಚನ ಹಾಗೂ ಭಾರತೀಯ ಸೇನೆ ಮತ್ತು ಅದರ ಕಾರ್ಯಾಚರಣೆಗಳ ವಿವಿಧ ಅಂಶಗಳನ್ನು ವಿವರಿಸುವ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಕೆಡೆಟ್ ದಾನಿಷ್ ಅಹ್ಮದ್ ಹಾಗೂ ಕೆಡೆಟ್ ನಿಶಾಂತ್ ನಾರಾಯಣ್ ಅವರು, ಯುದ್ಧ ಸಂದರ್ಭದಲ್ಲಿ ಹಾಗೂ ಶಾಂತಿಯ ಸಂದರ್ಭದಲ್ಲೆರಡರಲ್ಲೂ ಭಾರತೀಯ ಸೇನೆಯ ಪಾತ್ರದ ಕುರಿತು ಪ್ರಾತ್ಯಕ್ಷಿಕೆ ನೀಡಿ ಯುದ್ಧಭೂಮಿಯ ಹೊರತಾಗಿ ನಮ್ಮ ಹೆಮ್ಮೆಯ ಸೇವೆಯ ಬಹುಮುಖ ಜವಾಬ್ದಾರಿಗಳನ್ನುವಿದ್ಯಾರ್ಥಿಗಳಿಗೆ ಅರ್ಥೈಸಿದರು. ಕೆಡೆಟ್ ಸಾಮ್ರಾಟ್ ಅವರು ರಚಿಸಿ, ನಿರ್ದೇಶಿಸಿದ ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ಪರಮವೀರ ಚಕ್ರ ಪುರಸ್ಕೃತರಾದ ಯೋಗೇಂದ್ರಸಿAಗ್ ಯಾದವ್ ಅವರ ಜೀವನಗಾಥೆ ಹೊರತರಲಾಯಿತು.
ಈ ಸಂದರ್ಭ ಮಾತನಾಡಿದ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್, ಬದ್ಧತೆ, ಚಾರಿತ್ರö್ಯ, ಅಖಂಡತೆ, ನಿಷ್ಠೆ, ನೈತಿಕ ಧೈರ್ಯ, ಮತ್ತು ಶಿಸ್ತಿನಡಿ ಭಾರತೀಯ ಸೇನೆ ಮುನ್ನಡೆಯುತ್ತಿದೆ. ಈ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್, ಉಪಪ್ರಾಂಶುಪಾಲ ವಿಂಗ್ ಕಮಾಂಡರ್ ಮಹಮದ್ ಶಾಜಿ ಸೇರಿದಂತೆ ಇನ್ನಿತರರು ಹಾಜರಿದ್ದರು.