.ಕುಶಾಲನಗರ, ಜ. ೨೭: ಕುಶಾಲನಗರದ ನೆಹರು ಬಡಾವಣೆ ಶ್ರೀ ಬಲಮುರಿ ಸಿದ್ಧಿವಿನಾಯಕ ದೇವಾಲಯದ ೨೮ನೇ ವಾರ್ಷಿಕೋತ್ಸವ ಮತ್ತು ೨೬ನೇ ವರ್ಷದ ಉತ್ಸವ ಮೂರ್ತಿಯ ಮೆರವಣಿಗೆ ತಾ. ೨೮ ರಿಂದ ಎರಡು ದಿನಗಳ ಕಾಲ ನಡೆಯಲಿದೆ.

ತಾ. ೨೮ (ಇಂದು) ಬೆಳಿಗ್ಗೆ ದೇವಾಲಯದಲ್ಲಿ ಕಳಸ ಸ್ಥಾಪನೆ, ಗಣಪತಿ ಪೂಜೆ ನವಗ್ರಹ ಪೂಜೆ ದೇವಾಲಯ ಒಕ್ಕೂಟ ಸಮಿತಿಯ ಸಂಕಲ್ಪದೊAದಿಗೆ ಸಾಮೂಹಿಕ ಫಲ ತಾಂಬೂಲ ಅರ್ಪಣೆ ಕಾರ್ಯಕ್ರಮ ನಡೆಯಲಿದೆ. ಸಂಜೆ ೬.೩೦ಕ್ಕೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

ತಾ. ೨೯ ರಂದು ಶ್ರೀ ಬಲಮುರಿ ಸಿದ್ಧಿವಿನಾಯಕ ಸ್ವಾಮಿಯ ಪೂಜಾ ಮಹೋತ್ಸವ ಬೆಳಿಗ್ಗೆ ೯ ಗಂಟೆಯಿAದ ಜರಗಲಿದೆ ಮಧ್ಯಾಹ್ನ ಮಹಾಮಂಗಳಾರತಿ ನಂತರ ಅನ್ನ ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ ೭ ಗಂಟೆಗೆ ಉತ್ಸವ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮಾಡಲಾಗುವುದು ಎಂದು ದೇವಸ್ಥಾನ ಸೇವಾ ಟ್ರಸ್ಟ್ ಪ್ರಬಾರ ಅಧ್ಯಕ್ಷ ಕೆ.ವಿ. ಅರುಣ್ ತಿಳಿಸಿದ್ದಾರೆ.