ಮಡಿಕೇರಿ, ಜ. ೨೮: ಕೊಡಗು ಕಲಾವಿದರ ಬಳಗದ ವತಿಯಿಂದ ಚೆಯ್ಯಂಡಾಣೆಯ ಸಿನಿಮಾ ಕಲಾವಿದೆ ಚೆರುವಾಳಂಡ ಸುಜಲಾ ಹಾಗೂ ನಾಣಯ್ಯ ದಂಪತಿ ತೋಟದ ಮನೆಯಲ್ಲಿ ಜಿಲ್ಲೆಯ ಹಲವಷ್ಟು ಹಿರಿ-ಕಿರಿಯ ಸಿನಿಮಾ ಕಲಾವಿದರುಗಳು, ಬರಹಗಾರರು, ನಿರ್ದೇಶಕರು, ಗಾಯಕರು, ಛಾಯಾಚಿತ್ರ ಕಲಾವಿದರುಗಳು ಸಂತಸ ಸಮ್ಮಿಲನದಲ್ಲಿ ಭಾಗಿಗಳಾದರು. ದಶಕಗಳ ಹಿಂದೆ ಆರಂಭಗೊAಡ ನೋಂದಾಯಿತ ಕಲಾವಿದರ ಸಂಘವೂ ಕಾರ್ಯಚಟುವಟಿಕೆಗಳಿಲ್ಲದೆ ನಿಷ್ಕಿçಯವಾಗಿತ್ತು. ನಟ ನೆರವಂಡ ಉಮೇಶ್ ಹಾಗೂ ತಂಡದವರ ಸಂಚಾಲಕತ್ವದಲ್ಲಿ ವರ್ಷದಿಂದೀಚೆಗೆ ಸಂಘ ಮರುಜೀವ ಪಡೆದುಕೊಂಡಿದೆ.

ರಾಜ್ಯದ ಹಲವೆಡೆಗಳಿಂದ ಕಲಾವಿದರುಗಳು ಆಗಮಿಸಿದ್ದು, ಮೈಸೂರಿನಲ್ಲಿ ನೆಲೆಸಿರುವ ಸಂಗೀತಗಾರ, ಹಾರ್ಮೋನಿಯಂ ವಾದಕ ಚೆಕ್ಕೇರ ಅಪ್ಪಯ್ಯ ಅವರ ಉಪಸ್ಥಿತಿ, ಮಾತು, ಹಾಡು ಎಲ್ಲರಲ್ಲಿ ಸಂಚಲನ ಮೂಡಿಸಿತು. ಟಿ.ಡಿ. ಮೋಹನ್ ಅವರಿಂದ ಪ್ರಾರ್ಥನೆ, ಭವಾನಿ ನಾಣಯ್ಯ ಅವರಿಂದ ದೈವಸ್ತುತಿ, ಅಜಿತ್, ಬೋಸು ಅವರುಗಳಿಂದ ಹಾಡು, ಕಲಾವಿದೆ ಶ್ಯಾಮಲ ಅವರ ನೃತ್ಯ ನೆರೆದಿದ್ದವರನ್ನು ರಂಜಿಸಿತು. ಕಲಾಸೇವೆ ಹಾಗೂ ಕಲಾವಿದರಿಗೆ ನೀಡಿದ ಆತಿಥ್ಯ ಗಮನಿಸಿ ಸುಜಲಾ ಹಾಗೂ ನಾಣಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ನಟ, ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್, ಕಲಾವಿದ ನೆರವಂಡ ಉಮೇಶ್ ಮಾತನಾಡಿದರು. ನಿರ್ದೇಶಕಿ ಯಶೋಧ ಪ್ರಕಾಶ್, ಅಪಾಡಂಡ ರಘು ಅವರ ಪುತ್ರಿ, ಗಾಯಕಿ ಬೀನಾ, ಹಿರಿಯ ನಟಿ ಪ್ರಭಾ ನಾಣಯ್ಯ ಹಾಗೂ ಇತರರು ಹಾಜರಿದ್ದರು