ಕುಶಾಲನಗರ: ಕುಶಾಲನಗರ ಕೊಡವ ಸಮಾಜದ ವತಿಯಿಂದ ಸಮಾಜದ ಅಧ್ಯಕ್ಷ ವಾಂಚೀರ ಮನು ನಂಜುAಡ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ನಡೆಸಲಾಯಿತು.

ಸಮಾಜದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ, ಕಾರ್ಯದರ್ಶಿ ಅಯಿಲಪಂಡ ಸಂಜು ಬೆಳ್ಳಿಯಪ್ಪ, ನಿರ್ದೇಶಕರುಗಳು, ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಮತ್ತು ಸಮಾಜದ ಸದಸ್ಯರು ಇದ್ದರು.ಐಗೂರು: ಐಗೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಪಂಚಾಯಿತಿ ಅಧ್ಯಕ್ಷ ಜಿ.ಕೆ. ವಿನೋದ್ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಪಿಡಿಓ ಪೂರ್ಣಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.ಶನಿವಾರಸಂತೆ: ಕೊಡ್ಲಿಪೇಟೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಯತೀಶ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಗಣರಾಜ್ಯೋತ್ಸವ ಸಂವಿಧಾನ ಜಾರಿಗೆ ಬಂದ ದಿನವಾಗಿದ್ದು, ರಾಷ್ಟಿçÃಯ ಹಬ್ಬವಾಗಿ ಎಲ್ಲರು ಆಚರಿಸುತ್ತಿದ್ದೇವೆ. ಇಂದು ಡಾ. ಅಂಬೇಡ್ಕರ್ ಅವರೊಂದಿಗೆ ಸ್ವಾತಂತ್ರ‍್ಯಕ್ಕಾಗಿ ತ್ಯಾಗ-ಬಲಿದಾನ ಗೈದವರನ್ನು ಸ್ಮರಿಸುವಂತಹ ದಿನವೆಂದು ಹೇಳಿದರು.

ಹೇಮಾವತಿ ರೋಟರಿ ಕ್ಲಬ್‌ನ ಅಧ್ಯಕ್ಷ ಉಮೇಶ್, ಸದಸ್ಯರಾದ ಪ್ರವೀಣ್, ದಿನೇಶ್, ಗಣೇಶ್, ಸದಸ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಧನಿಕಾ, ಸಮುದಾಯ ಆರೋಗ್ಯಾಧಿಕಾರಿ ಧರಣೀಶ್ ರಾಜ್, ಅಖಿಲ್ ರಾಜ್, ಆಶಾ ಕಾರ್ಯಕರ್ತೆಯರು, ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.ಸೋಮವಾರಪೇಟೆ: ತಾಲೂಕು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಎಲ್. ಸುಕುಮಾರಿ, ಪ.ಪಂ. ಪೌರ ಕಾರ್ಮಿಕರಾದ ಸಿ.ವಿ. ಶಶಿಕಲಾ, ಅಗ್ನಿಶಾಮಕ ಠಾಣೆಯ ಚಾಲಕ ಹೆಚ್. ಮಹೇಂದ್ರ, ಅಂಗನವಾಡಿ ಕಾರ್ಯಕರ್ತೆ ಕೊಡ್ಲಿಪೇಟೆ ನವಗ್ರಾಮದ ಸರೋಜಮ್ಮ, ಆಶಾ ಕಾರ್ಯಕರ್ತೆ ಬ್ಯಾಡಗೊಟ್ಟದ ಶಹೀದಾ ಅವರುಗಳನ್ನು ಗಣ್ಯರು ಸನ್ಮಾನಿಸಿದರು.

ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ಪೊಲೀಸ್ ಇನ್ಸ್ಪೆಕ್ಟರ್ ಮುದ್ದುಮಹದೇವ, ಆರ್‌ಎಫ್‌ಓ ಶೈಲೇಂದ್ರ ಕುಮಾರ್, ಬಿ.ಇ.ಓ. ಕೃಷ್ಣಪ್ಪ, ಚೌಡ್ಲು ಗ್ರಾ.ಪಂ. ಅಧ್ಯಕ್ಷೆ ಸಿ.ಎಸ್. ಗೀತಾ, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಜಿ.ಎಂ. ಕಾಂತರಾಜ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎ. ಆದಂ, ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಸದಸ್ಯ ಬಿ.ಈ. ಜಯೇಂದ್ರ, ಜಾನಕಿ ವೆಂಕಟೇಶ್, ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ಸೇರಿದಂತೆ ಇತರರು ಸನ್ಮಾನಿಸಿದರು.ಮಡಿಕೇರಿ: ಹೊದ್ದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಧ್ವಜಾರೋಹಣವನ್ನು ಮುಖ್ಯ ಶಿಕ್ಷಕಿ ಕೆ.ಎಂ. ಪಾರ್ವತಿ ನೆರವೇರಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಎಂ.ಜಿ. ಗಣೇಶ್ ವಹಿಸಿದ್ದರು. ಮುಖ್ಯ ಅತಿಥಿಮಡಿಕೇರಿ: ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ವತಿಯಿಂದ ಗಣರಾಜ್ಯೋತ್ಸವವನ್ನು ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಅಧ್ಯಕ್ಷ ಭರತ್ ಅವರ ಮುಂದಾಳತ್ವದಲ್ಲಿ ಧ್ವಜಾರೋಹಣ ಮಾಡಲಾಯಿತು.

ಈ ಸಂದರ್ಭ ಉಮೇಶ್, ವಿಜಯ್, ಲಿಂಗಪ್ಪ, ಪುರುಷೋತ್ತಮ್, ಚಂದ್ರ, ಮಂಜುನಾಥ್, ಸುಲೇಮಾನ್, ಹರೀಶ್ ಉಪಸ್ಥಿತರಿದ್ದರು.Àಳಾಗಿ ಮುಂಡೋಟಿರ ಜೂಬಿ ಉಪಸ್ಥಿತರಿದ್ದರು. ಪಂಚಾಯಿತಿ ಸಿಬ್ಬಂದಿ ಸುಕುಮಾರ ಹಾಗೂ ಎಸ್.ಡಿ.ಎಂ.ಸಿ. ಸದಸ್ಯರುಗಳಾದ ಹೆಚ್.ಸಿ. ಮೊಣ್ಣಪ್ಪ, ಹೆಚ್.ಎಸ್. ಕಾವ್ಯ, ಸುರೇಶ, ವೈ.ಪಿ. ರಶಿಕ, ವೈ.ಟಿ ಗಗನ್, ಹೆಚ್.ಎಸ್. ಬೋಜಿ, ವಿ.ಎಸ್. ಸುಜಾತ, ಅಡುಗೆ ಸಿಬ್ಬಂದಿ ಮರಿಯಾ ಹಾಜರಿದ್ದರು.

ಮುಖ್ಯ ಶಿಕ್ಷಕಿ ಕೆ.ಎಂ. ಪಾರ್ವತಿ ಸ್ವಾಗತಿಸಿ, ಶಿಕ್ಷಕಿ ಯು.ಆರ್. ಲತಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ದತ್ತಿನಿಧಿಯ ಬಹುಮಾನ ವಿತರಣೆ ಮಾಡಲಾಯಿತು. ದಾನಿಗಳಾದ ಮುಂಡೋಟಿರ ಜೂಬಿ ರೂ. ೧ ಸಾವಿರ ಮೌಲ್ಯದ ಟಿಫನ್ ಬಾಕ್ಸ್ಗಳನ್ನು, ಸುಕುಮಾರ ರೂ. ೧ ಸಾವಿರ ಮೌಲ್ಯದ ಜಾಮೆಟ್ರಿ ಬಾಕ್ಸ್ಗಳನ್ನು ಹಾಗೂ ಮುಂಡೋಟಿರ ಬೆಳ್ಯಪ್ಪ ಪೌಷ್ಟಿಕ ಆಹಾರ, ಕೋಳಿ ಮೊಟ್ಟೆಯನ್ನು ಶಾಲೆಗೆ ನೀಡಿದರು. ಪಂಚಾಯಿತಿ ಗ್ರಂಥಾಲಯದ ಮೇಲ್ವಿಚಾರಕಿ ಸರಸ್ವತಿ ಸಿಹಿ ತಿಂಡಿ ವಿತರಿಸಿದರು. ಶಿಕ್ಷಕಿ ಯು.ಆರ್. ಲತಾ ವಂದಿಸಿದರು.ಕಡAಗ: ಕಡಂಗ ಬದ್ರಿಯಾ ಮದರಸದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಬದ್ರಿಯಾ ಮದರಸ ಮುಖ್ಯೋಪಾಧ್ಯಾಯ ಹುಸೈನಾರ್ ಸಅದಿ ನೆರವೇರಿಸಿ ನಂತರ ದಿನದ ಮಹತ್ವದ ಕುರಿತು ಮಾತನಾಡಿದರು.

ಈ ಸಂದರ್ಭ ಅಂಶಾದ್ ಅನ್ವಾರಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭ ರಜಾಕ್ ಮುಸ್ಲಿಯಾರ್, ಇಸ್ಮಾಯಿಲ್ ಹಾಜಿ, ಉಮ್ಮರ್ ಸಿಇ, ಅಶ್ರಫ್ ಸಿಎ, ನಿಝಾರ್ ಎಂ.ಎA., ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು.ಮಡಿಕೇರಿ: ಸಂವಿಧಾನದ ಆಶಯಗಳನ್ನು ಪಾಲಿಸಿ ಅದರಂತೆ ಬದುಕಿನಲ್ಲಿ ನಡೆಯಬೇಕು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು.

ಗಣರಾಜ್ಯೋತ್ಸವದ ಪ್ರಯುಕ್ತ ಕೊಡಗು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮ ಸಂವಿಧಾನ ನಮಗೆ ಬದುಕುವ ಕ್ರಮವನ್ನು ತಿಳಿಸಿದ್ದು ಅದರಂತೆ ನಡೆಯುತ್ತೇವೆ ಎಂದು ದೃಢ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೊಕ್ಕಲೆರ ಸುಜು ತಿಮ್ಮಯ್ಯ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ದಿನದ ಮಹತ್ವದ ಕುರಿತು ಮಾತನಾಡಿದರು.

ಮೂಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಸೇವಾದಳದ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ. ಸುರೇಶ್, ಕೆ.ಜೆ. ಪೀಟರ್, ಪುಷ್ಪ ಪೂಣಚ್ಚ, ಜಿ.ಸಿ. ಜಗದೀಶ್, ಪ್ರಮುಖರಾದ ಮುನೀರ್ ಮಾಚರ್, ಲೀಲಾ ಶೇಷಮ್ಮ, ದಿನೇಶ್, ಮೀನಾಜ್ ಪ್ರವೀಣ್, ಶಶಿ, ಅಯಾತ್, ಹಸೇನ್, ಶ್ರೀಮತಿ ಬಂಗೇರ, ಶೇಖ್ ಅಹಮದ್, ವಸಂತ್ ಭಟ್, ಆದಂ, ರಿಯಾಸುದ್ದೀನ್, ಪ್ರೇಮಾ ಲಿಂಗಪ್ಪ, ಜಿ.ಅರ್. ರಾಜು, ರಾಣಿ, ಉಷಾ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.ಪಾಲಿಬೆಟ್ಟ: ಪಾಲಿಬೆಟ್ಟ ವರ್ತಕರ ಸಂಘದಿAದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಜುಮ್ಮ ಮಸೀದಿ ಕಟ್ಟಡದಲ್ಲಿರುವ ಕಚೇರಿ ಮುಂಭಾಗದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಧ್ವಜಾರೋಹಣ ಮಾಡಿ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಈ ಸಂದರ್ಭ ಹಿರಿಯ ವರ್ತಕ ಟಿ.ಕೆ. ಗಂಗಾಧರ್, ಕುಂಞÂ ಮೊಹಮ್ಮದ್, ಸದಾಶಿವ ನಾಯರ್, ಸೈನುದಿನ್, ಸಿ.ಕೆ. ಮೊಯ್ದ, ಖಾದರ್, ರಶೀದ್ ಮತ್ತಿತರರು ಇದ್ದರು.

ಸಂಘದ ಅಧ್ಯಕ್ಷ ಮುನೀರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರುಗಳು ಹಾಗೂ ಸದಸ್ಯರುಗಳು ಹಾಜರಿದ್ದರು.ಸುಂಟಿಕೊಪ್ಪ: ಗುಂಡುಗುಟ್ಟಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಯೋಧ ಎ.ಸಿ. ಪೊನ್ನಪ್ಪ ಧ್ವಜಾರೋಹಣ ನೆರವೇರಿಸಿದರು. ಮಕ್ಕಳಿಂದ ಭಾಷಣ, ಸಾಮೂಹಿಕ ಕವಾಯತ್, ಡಂಬಲ್ಸ್ ಲೆಂಜೆಸ್‌ಗಳನ್ನು ಆಕರ್ಷಣೆಯೊಂದಿಗೆ ನಿರ್ವಹಿಸಿದರು. ಸಮಾರಂಭದಲ್ಲಿ ಶಾಲೆಯ ಪ್ರಬಾರ ಮುಖ್ಯ ಶಿಕ್ಷಕಿ ಎಸ್.ಎಲ್. ಗೌರಮಣಿ ಪ್ರಾಸ್ತಾವಿಕವಾಗಿ ದಿನದ ಮಹತ್ವದ ಕುರಿತು ದೇಶದ ಸಂವಿಧಾನದ ಬಗ್ಗೆ ಮಾಹಿತಿಯನ್ನು ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಯೋಧ ಎ.ಸಿ. ಪೊನ್ನಪ್ಪ ವಹಿಸಿದ್ದರು. ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.

ಶಿಕ್ಷಕಿ ಪೂರ್ಣಿಮಾ ದಿನದ ಮಹತ್ವದ ಬಗ್ಗೆ ಮಾತನಾಡಿ, ವಂದಿಸಿದರು.*ಗೋಣಿಕೊಪ್ಪ: ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಆವರಣದಲ್ಲಿ ಕಾರ್ಯಕ್ರಮ ನಡೆಯಿತು. ಗ್ರಾ.ಪಂ. ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಧ್ವಜಾರೋಹಣ ನೆರವೇರಿಸಿದರು.

ಮಹನೀಯರ ಹೋರಾಟದ ಫಲವಾಗಿ ಭಾರತ ಗಣತಂತ್ರ ದೇಶವಾಗಿದೆ ಎಂದು ಗಣಪತಿಯವರು ಈ ಸಂದರ್ಭ ಹೇಳಿದರು. ಗಾ.ಪಂ. ಸದಸ್ಯರುಗಳಾದ ಬಿ.ಎನ್. ಪ್ರಕಾಶ್, ಸಫೂರ ಭಾನು, ಕೊಣಿಯಂಡ ಬೋಜಮ್ಮ, ಅಫ್ಜಲ್ ಸೇರಿದಂತೆ ಪಂಚಾಯಿತಿ ಸಿಬ್ಬಂದಿಗಳು ಇದ್ದರು.ಶನಿವಾರಸಂತೆ: ಕೊಡ್ಲಿಪೇಟೆ ಕಲ್ಲುಮಠದ ಎಸ್.ಕೆ.ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಿ.ಎಸ್. ಧನಿಕಾ ಧ್ವಜಾರೋಹಣ ನೆರವೇರಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷ ಮಹಾಂತ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ನಮ್ಮ ದೇಶದ ಸಂವಿಧಾನವನ್ನು ಅರಿತು ಶಿಸ್ತು, ಮೌಲ್ಯ ಹಾಗೂ ಉತ್ತಮ ಚಟುವಟಿಕೆಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ರಾಷ್ಟçವನ್ನು ಬಲಪಡಿಸಲು ಸಾಧ್ಯ ಎಂದರು.

ಮುಖ್ಯ ಅತಿಥಿ ಕಂದಾಯ ಅಧಿಕಾರಿ ಎನ್.ಜೆ. ಮನುಕುಮಾರ್ ಅಂಬೇಡ್ಕರ್ ವ್ಯಕ್ತಿತ್ವ ಹಾಗೂ ಜೀವನದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು. ಸಂಸ್ಥೆ ಉಪಾಧ್ಯಕ್ಷ ಡಿ.ಎಸ್. ವಿಶ್ವನಾಥ್, ಕಾರ್ಯದರ್ಶಿ ಹೆಚ್.ಎಂ. ದಿವಾಕರ್, ನಿರ್ದೇಶಕರಾದ ಎಸ್.ಎಸ್. ಶಿವಶೇಖರ್, ಮುಖ್ಯ ಶಿಕ್ಷಕ ಹೆಚ್.ಎಂ. ಅಭಿಲಾಷ್, ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.ಪೊನ್ನಂಪೇಟೆ: ಪೊನ್ನಂಪೇಟೆಯ ಸಂತ ಅಂತೋಣಿ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.ಕುಶಾಲನಗರ: ಕುಶಾಲನಗರ ಪುರಸಭೆ ಕಚೇರಿ ಆವರಣದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಜರುಗಿತು. ಪುರಸಭೆ ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್ ಧ್ವಜಾರೋಹಣ ನೆರವೇರಿಸಿದರು. ಹಿರಿಯ ಆರೋಗ್ಯ ಅಧಿಕಾರಿ ಉದಯಕುಮಾರ್ ಮತ್ತು ಸಿಬ್ಬಂದಿಗಳು ಇದ್ದರು.