ಮಡಿಕೇರಿ, ಜ. ೨೮: ಪ್ರವಾಸಿಗರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡಿದ ದೂರಿನ ಹಿನ್ನೆಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅಧ್ಯಕ್ಷತೆಯಲ್ಲಿ ಪೊಲೀಸ್ ಅಧಿಕಾರಿಗಳು, ಆರ್ಟಿಓ ಅಧಿಕಾರಿಗಳು ಹಾಗೂ ಜೀಪ್ ಚಾಲಕರ ಸಭೆ ನಡೆಯಿತು.
ಮಾಂದಲಪಟ್ಟಿಗೆ ಬಾಡಿಗೆ ಆಧಾರದಲ್ಲಿ ತೆರಳುವ ಕೆಲ ಜೀಪ್ಗಳ ಚಾಲಕರು ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಕುರಿತು ದೂರು ಬರುತ್ತಿದೆ. ಅಲ್ಲದೆ, ಈ ಕುರಿತು ಬೆಂಗಳೂರಿನ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಜೀಪ್ ಚಾಲಕನಿಂದ ಆದ ತೊಂದರೆಯ ಬಗ್ಗೆ ವೀಡಿಯೋ ಮಾಡಿ ಹರಿಬಿಟ್ಟಿರುವ ಕುರಿತು ಪ್ರಸ್ತಾಪಿಸಿದ ಎಸ್ಪಿ ಬಿಂದುಮಣಿ, ಮುಂದೆ ಈ ರೀತಿ ಘಟನೆಗಳು ಮರುಕಳಿಸದಂತೆ ಜೀಪ್ ಚಾಲಕರಿಗೆ ಎಚ್ಚರಿಸಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆಯುವಂತಿಲ್ಲ, ವೇಗದ ಚಾಲನೆ ಮಾಡುವಂತಿಲ್ಲ ಎಂದು ಚಾಲಕರಿಗೆ ಸೂಚಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆ ಮಾಡುವುದು ಕಂಡುಬAದಲ್ಲಿ ಎಫ್ಐಆರ್ ಮಾಡಲಾಗುವುದು. ದಾಖಲಾತಿಯನ್ನು ಸಮರ್ಪಕವಾಗಿಟ್ಟುಕೊಳ್ಳಬೇಕು. ಅಕ್ರಮವಾಗಿ ಹಳದಿ ಬೋರ್ಡ್ ಅಳವಡಿಸಿಕೊಂಡಿರುವುದು ಕಂಡುಬAದಲ್ಲಿ ಕಠಿಣ ಕ್ರಮವಹಿಸಲಾಗುವುದು. ಆರ್ಟಿಓ ಅಧಿಕಾರಿಗಳಿಗೂ ಕೂಡ ಈ ಬಗ್ಗೆ ಕ್ರಮವಹಿಸಲು ತಿಳಿಸಲಾಗಿದೆ. ಚಾಲಕರು ಎಚ್ಚರಿಕೆ ಹಾಗೂ ಜವಾಬ್ದಾರಿಯಿಂದ ವಾಹನ ಚಾಲನೆ ಮಾಡಬೇಕು. ತಪ್ಪುಗಳು ಕಂಡುಬAದಲ್ಲಿ ನಿರ್ಧಾಕ್ಷಿಣ್ಯ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದರು.
ಡಿವೈಎಸ್ಪಿ ಸೂರಜ್, ಗ್ರಾಮಾಂತರ ಇನ್ಸ್ಪೆಕ್ಟರ್ ಚಂದ್ರಶೇಖರ್, ಡಿಎಸ್ಬಿ ಇನ್ಸ್ಪೆಕ್ಟರ್ ಐ.ಪಿ. ಮೇದಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.