ಶನಿವಾರಸಂತೆ, ಜ. ೨೮: ನಿರಂತರವಾಗಿ ಯೋಗಾಭ್ಯಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಪೊಲೀಸ್ ವೃತ್ತ ನಿರೀಕ್ಷಕ ಜಿ. ಕೃಷ್ಣರಾಜ್ ಹೇಳಿದರು.
ಪಟ್ಟಣದ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ನಾಗಮಂಗಲದ ಹೊಂಗಿರಣ ದೇಶಿ ಚಿಕಿತ್ಸಾ ಕೇಂದ್ರದ ಸ್ವಾಸ್ಥö್ಯ ಜೀವನ ಮಾರ್ಗ ಯೋಗ ಪ್ರತಿಷ್ಠಾನ, ಶನಿವಾರಸಂತೆ ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ವತಿಯಿಂದ ೮ ದಿನಗಳ ಕಾಲ ನಡೆದ ಯೋಗ ಮತ್ತು ದೇಶಿ ಚಿಕಿತ್ಸಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಯಾಗಿ ಹಾಗೂ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಶಿಬಿರದ ಸಾರಥ್ಯ ವಹಿಸಿದ್ದ ಯೋಗ ಗುರು ಲಕ್ಷ್ಮಣ್ ಜೀ ಮಾತನಾಡಿ, ಯೋಗ ರೋಗಗಳಿಂದ ಬಳಲುವವರಿಗೆ ಆಶಾಕಿರಣ. ಶಿಬಿರಾರ್ಥಿಗಳ ಉತ್ಸಾಹದ ಭಾಗವಹಿಸುವಿಕೆಯಿಂದ ಶಿಬಿರ ಯಶಸ್ವಿಯಾಗಿದೆ ಯೋಗಾಭ್ಯಾಸವನ್ನು ನಿತ್ಯದ ಜೀವನದಲ್ಲಿ ದಿನಚರಿಯಾಗಿ ಮಾಡಿಕೊಂಡಾಗ ಮಾನಸಿಕ ಒತ್ತಡದಿಂದ ಹೊರಬರಬಹುದಾಗಿದೆ ಎಂದರು. ಮಕ್ಕಳ ತಜ್ಞ ಡಾ.ಚಿದಾನಂದ್, ಶಿಬಿರಾರ್ಥಿಗಳಾದ ಜಯಸ್ವಾಮಿ, ಕಾಜೂರು ಹರೀಶ್, ಹಸೀನಾ ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು.ಭಜನಾ ಕಾರ್ಯಕ್ರಮ ನೀಡಿದ ಸಿ.ಪ್ರಕಾಶ್ಚಂದ್ರ ಹಾಗೂ ಬಾಲಕೃಷ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶನಿವಾರಸಂತೆ ಪತಂಜಲಿ ಯೋಗ ಕೇಂದ್ರದ ಯೋಗಗುರು ಎ.ಡಿ. ಮೋಹನ್ ಕುಮಾರ್, ಸ್ವಾಸ್ಥö್ಯ ಮಾರ್ಗ ರಾಜ್ಯ ಸಂಚಾಲಕ ಕೀರ್ತಿ ಲಕ್ಷ್ಮಣ್, ಉಮಾಸುತ ಹಾಜರಿದ್ದರು. ೩೫ ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.ಮೋಹನ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.