ಸೋಮವಾರಪೇಟೆ, ಜ. ೨೮: ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಜರುಗಿದ ೭೭ನೇ ಗಣರಾಜ್ಯೋತ್ಸವದಲ್ಲಿ ನಡೆದ ಗೌರವ ರಕ್ಷೆ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದ ತಂಡದಲ್ಲಿ ಕೊಡಗಿನ ತಾನ್ಯಾ ಭಾಗಿಯಾಗಿದ್ದಳು.
ರಾಜ್ಯಪಾಲ ಥಾವರ್ಚಂದ್ ಗೇಹಲೋಟ್ ಅವರಿಗೆ ಗೌರವ ರಕ್ಷೆ ನೀಡಿದ ಸಂದರ್ಭ ಆಯೋಜಿಸಿದ್ದ ಪೆರೇಡ್ನಲ್ಲಿ ಜಿಲ್ಲೆಯ ತಾನ್ಯಾ ಮುರುಳೀಧರ್ ಅವರನ್ನು ಒಳಗೊಂಡ ರಾಷ್ಟಿçÃಯ ಸೇವಾದಳ ತಂಡ ಭಾಗಿಯಾಗಿದ್ದು, ಈ ತಂಡಕ್ಕೆ ಪ್ರಥಮ ಬಹುಮಾನ ಲಭಿಸಿದೆ.
ಶಿವಮೊಗ್ಗದ ಬಿಎಸ್ಸಿ ಫಾರೆಸ್ಟ್ ಸೈನ್ಸ್ ವ್ಯಾಸಂಗ ಮಾಡುತ್ತಿರುವ ಈಕೆ, ಸೋಮವಾರಪೇಟೆಯ ಹಿರಿಯ ಪತ್ರಕರ್ತ ಎಸ್.ಎ. ಮುರುಳೀಧರ್ ಹಾಗೂ ಸರಿತಾ ದಂಪತಿ ಪುತ್ರಿ.