ನಾಪೋಕ್ಲು, ಜ. ೨೮: ಇಲ್ಲಿಗೆ ಸಮೀಪದ ಚೆರಿಯಪರಂಬು ದರ್ಗಾದ ವಾರ್ಷಿಕ ಮಖಾಂ ಉರೂಸ್ ಸಮಾರಂಭದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು.

ಪ್ರತಿ ವರ್ಷ ಜರುಗುವ ಉರೂಸ್ ಈ ವರ್ಷ ಫೆಬ್ರವರಿ ೬ ರಿಂದ ಹತ್ತರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದರ ಪೋಸ್ಟರ್ ಅನ್ನು ಶುಕ್ರವಾರ ಜುಮಾ ಮಸೀದಿಯ ಆವರಣದಲ್ಲಿ ಆಯೋಜಿಸಲಾದ ಸರಳ ಸಮಾರಂಭದಲ್ಲಿ ಮಸೀದಿಯ ಸಹಾಯಕ ಖತೀಬರಾದ ರಫೀಕ್ ಸಖಾಫಿ ಅವರು ಬಿಡುಗಡೆಗೊಳಿಸಿದರು.ಚೆರಿಯಪರಂಬು ಜಮಾಯತಿನ ಹಾಲಿ ಹಾಗೂ ಮಾಜಿ ಅಧ್ಯಕ್ಷರು ಪದಾಧಿಕಾರಿಗಳು, ಸದಸ್ಯರು ಹಾಗೂ ಮತ ಬಾಂಧವರು ಹಾಜರಿದ್ದರು.