ಮಡಿಕೇರಿ, ಜ. ೨೮: ಸುಮಾರು ೬೫ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಡಗದಾಳು ಗ್ರಾಮ ಪಂಚಾಯಿತಿ ಕಟ್ಟಡ, ಡಿಜಿಟಲ್ ಗ್ರಂಥಾಲಯ ಹಾಗೂ ಅರಿವು ಕೇಂದ್ರ ಉದ್ಘಾಟನಾ ಸಮಾರಂಭ ಇತ್ತೀಚಿಗೆ ನಡೆಯಿತು.
ಗ್ರಾ.ಪಂ. ಕಟ್ಟಡವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿ ಮಾತನಾಡಿ, ಸೇವಾ ಕಾರ್ಯಗಳ ಕುರಿತು ಸಾರ್ವಜನಿಕರು ಜನಪ್ರತಿನಿಧಿಗಳನ್ನು ಎಚ್ಚರಿಸಬೇಕು. ಅಧಿಕಾರಿಗಳು ಜನಸೇವೆಯೆ ಜನಾರ್ಧನ ಸೇವೆಗೆ ಅರ್ಥ ಬರುವಂತೆ ಕಾರ್ಯನಿರ್ವಹಿಸಬೇಕು. ತಾನು ಯಾವುದೇ ಅಭಿವೃದ್ಧಿ ಕೆಲಸಕ್ಕೆ ರಾಜಕೀಯ ಸಂಬAಧ ಕಲ್ಪಿಸುವುದಿಲ್ಲ. ಇದೇ ಭಾವನೆ ಎಲ್ಲರಲ್ಲೂ ಇರಬೇಕು. ಕಡಗದಾಳು ವ್ಯಾಪ್ತಿಗೆ ಈ ತನಕ ಸುಮಾರು ರೂ. ೧ ಕೋಟಿ ವೆಚ್ಚದ ಕಾಮಗಾರಿ ನಡೆದಿದ್ದು, ಮತ್ತಷ್ಟು ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ಹಾಗೂ ಮಡಿಕೇರಿಯಿಂದ ಅಭ್ಯತ್‌ಮಂಗಲದವರಗೆ ರೂ. ೧೩ ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.
ಡಿಜಿಟಲ್ ಗ್ರಂಥಾಲಯ ಹಾಗೂ ಅರಿವು ಕೇಂದ್ರ ಉದ್ಘಾಟಿಸಿ ಮಾತನಾಡಿದ ಸಂಸದ ಯದುವೀರ್ ಒಡೆಯರ್, ಗ್ರಾಮೀಣ ಪ್ರದೇಶದ ಅಭಿವೃದ್ಧಿ ದೃಷ್ಟಿಯಲ್ಲಿ ವಿಬಿ ಜಿ ರಾಮ್ ಜಿ ಕಾರ್ಯರೂಪಕ್ಕೆ ತರಲಾಗಿದೆ. ಇದೊಂದು ಉತ್ತಮ ಯೋಜನೆಯಾಗಿದೆ.
ಜಿರಾಮ್ ಉದ್ದೇಶವನ್ನು ಆರ್ಥೈಸಿಕೊಳ್ಳದೆ ಅಪಪ್ರಚಾರ ನಡೆಯುತ್ತಿದೆ. ಈ ಯೋಜನೆಯಲ್ಲಿ ಬಹಳಷ್ಟು ಸುಧಾರಣೆಯನ್ನು ತರಲಾಗಿದೆ. ಮಳೆಹಾನಿ ಪ್ರದೇಶಗಳಲ್ಲಿ ತಡೆ ಗೋಡೆಗಳ ಅವಶ್ಯಕತೆಯಿದೆ ಈ ಯೋಜನೆಯಲ್ಲಿ ಆರ್ಥಿಕ ಚೌಕಟ್ಟಿನ ಅಡಿಯಲ್ಲಿ ಹೆಚ್ಚು ತಡೆಗೋಡೆಗಳನ್ನು ನಿರ್ಮಿಸಲು ಅವಕಾಶವಿದೆ ಎಂದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಎನ್.ಬಿ. ನಿರ್ಮಲ, ಉಪಾಧ್ಯಕ್ಷ ಹೆಚ್.ಜಿ. ಯೋಗೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಶೇಖರ್, ಪಿಆರ್‌ಇಡಿ ಅಭಿಯಂತರ ಜಯಣ್ಣ, ಶಕ್ತಿ ದಿನಪತ್ರಿಕೆ ಸಲಹಾ ಸಂಪಾದಕ ಬಿ.ಜಿ. ಅನಂತಶಯನ, ಮಾಜಿ ಅಧ್ಯಕ್ಷೆ ಪಿ.ಬಿ. ಭಾರತಿ ಹಾಜರಿದ್ದರು. ಅಭಿವೃದ್ಧಿ ಅಧಿಕಾರಿ ಕೆ. ಅನಿತಾ ಸ್ವಾಗತಿಸಿ, ಸದಸ್ಯ ಎಂ.ಎಸ್. ಶಾಂಭಯ್ಯ ನಿರೂಪಿಸಿ, ಜಯಣ್ಣ ವಂದಿಸಿದರು.