ಗೋಣಿಕೊಪ್ಪಲು, ಜ. ೨೮: ಕಾರಿಗೆ ಪಿಕಪ್ ಡಿಕ್ಕಿಗೊಳಿಸಿರುವ ಘಟನೆ ಶ್ರೀಮಂಗಲ ಬಳಿ ನಡೆದಿದ್ದು, ಸಂಬAಧಿಯಿAದಲೇ ಕೊಲೆ ಯತ್ನ ನಡೆದಿದೆ ಎಂದು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆ ಓರ್ವನನ್ನು ಪೊಲೀಸರು ಬಂಧಿಸಿ ಕ್ರಮಕೈಗೊಂಡಿದ್ದಾರೆ.
ಟಿ. ಶೆಟ್ಟಿಗೇರಿ ನಿವಾಸಿ ಗಣೇಶ್ ಬಂಧಿತ ಆರೋಪಿ. ಆತನನ್ನು ಪೊಲೀಸರು ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಟಿ. ಶೆಟ್ಟಿಗೇರಿ ಗ್ರಾಮದ ನಿವಾಸಿ ಬಿ.ಹೆಚ್. ರವಿ ಎಂಬವರು ಶ್ರೀಮಂಗಲ ಪೊಲೀಸ್ ಠಾಣೆಗೆ ಈ ಸಂಬAಧ ದೂರು ನೀಡಿದ್ದು, ಇದರಲ್ಲಿ ತಾ. ೨೬ರ ಸಂಜೆ ೭.೪೫ ರ ವೇಳೆಗೆ ಸಂಸಾರ ಸಮೇತ ತಮ್ಮ ಸ್ವಿಫ್ಟ್ ಕಾರಿನಲ್ಲಿ ಶ್ರೀಮಂಗಲದಿAದ ಟಿ. ಶೆಟ್ಟಿಗೇರಿ ಕಡೆಗೆ ಕಾರ್ಯನಿಮಿತ್ತ ಪ್ರಯಾಣಿಸುತ್ತಿದ್ದ ವೇಳೆ ಶ್ರೀಮಂಗಲದ ಸಮೀಪವಿರುವ ಸೇತುವೆ ಬಳಿ ಪಿಕಪ್ ವಾಹನವೊಂದು ಹಿಂಬದಿಯಿAದ ಬಂದು ರವಿ ಅವರು ಚಲಾಯಿಸುತ್ತಿದ್ದ ಕಾರಿನ ಬಲ ಬದಿಗೆ ಡಿಕ್ಕಿಯಾಗಿದೆ.
ಕಾರಿನಲ್ಲಿದ್ದ ರವಿ ಗಮನಿಸಿದಾಗ ಪಿಕಪ್ ವಾಹನ ಚಲಾಯಿಸುತ್ತಿದ್ದವರು ಅವರ ಕುಟುಂಬದವರೇ ಆದ ಗಣೇಶ್ ಎಂದು ಗುರುತಿಸಿದ್ದಾರೆ. ಈ ಸಂದರ್ಭ ಆರೋಪಿ ಗಣೇಶ್ ‘ನಾನು ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿ ಅಲ್ಲಿಂದ ತೆರಳಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನ ಅನ್ವಯ ಶ್ರೀಮಂಗಲ ಪೊಲೀಸರು ಘಟನೆ ನಡೆದ ಕೆಲ ಸಮಯದಲ್ಲಿಯೇ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಹಿಂದೆ ರವಿ ಅವರ ಮನೆಗೆ ಬೆಂಕಿ ಬಿದ್ದಿದ್ದು, ಈ ಸಂಬAಧ ದಾಖಲಾಗಿದ್ದ ದೂರಿನಡಿ ತನಿಖೆ ಕೈಗೊಂಡ ಪೊಲೀಸರು ಇದರಲ್ಲಿ ಆರೋಪಿ ಕೈವಾಡ ಇರುವುದಾಗಿ ಪೊಲೀಸರು ಆತನ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದರು. ನಂತರ ಆತ ತಲೆಮರೆಸಿಕೊಂಡು ನಿರೀಕ್ಷಣಾ ಜಾಮೀನನ್ನು ಪಡೆದುಕೊಂಡಿದ್ದನು. ಆರೋಪಿ ಗಣೇಶ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ ೧೦೯, ೩೫೧(೨) ೩೫೨ (೩) ಅಡಿಯಲ್ಲಿ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.